ಚಂದನವನ (sandalwood)

ಪ್ರಚಾರದಿಂದ ಚಿತ್ರ ಗೆಲ್ಲಬಹುದೇ?

Go down

ಪ್ರಚಾರದಿಂದ ಚಿತ್ರ ಗೆಲ್ಲಬಹುದೇ?

Post by Admin on Sun Jun 10, 2012 7:12 pm

ಪ್ರಚಾರದಿಂದ ಚಿತ್ರ ಗೆಲ್ಲಬಹುದೇ?

ಇದೆಲ್ಲಾ ಗಣೇಶ್ ಅವರಿಗೆ ಗೊತ್ತಿದೆ ತಾನೇ? ಜನಪ್ರಿಯ ಸ್ಟಾರ್ ಒಬ್ಬ ಎದುರುಗಡೆ ಬಂದರೆ ಜನ ಮುತ್ತಿಕೊಳ್ಳುವುದು ಸಹಜ. ಅದು ಮೊದಲೇ ಗೊತ್ತಿದ್ದರೆ ಜನ ಅಲ್ಲಿ ಸೇರುವುದೂ ಸಹಜ. ತೆರೆಯಲ್ಲಿ ನೋಡುವ ನಟರನ್ನು ಪ್ರತ್ಯಕ್ಷವಾಗಿ ನೋಡಲು ಜನ ಮುಗಿಬೀಳುವುದು ಖಂಡಿತ. ಅದು ಜನಪ್ರಿಯತೆಗೆ ಸಾಕ್ಷಿಯಾಗಬಹುದೇ ಹೊರತೂ ಸಿನಿಮಾ ಗೆಲುವಿಗೆ ಕಾರಣವಾಗುವುದಿಲ್ಲ.

ಅದಕ್ಕೆ ಇನ್ನೂ ಸರಿಯಾದ ಸಾಕ್ಷಿಯೆಂದರೆ ದರ್ಶನ್ ಸಾರಥಿ ಚಿತ್ರದ ನಂತರ ಬಂದ ಚಿಂಗಾರಿಗೆ ಮಿತಿಮೀರಿದ ಪ್ರಚಾರವೇ ಸಿಕ್ಕಿತ್ತು. ಆದರೂ ಅದು ಸಾರಥಿಯಷ್ಟು ಸೂಪರ್ ಹಿಟ್ ಆಗಲಿಲ್ಲ. ಪುನೀತ್ ಕಥೆಯೂ ಅಷ್ಟೇ, ಜಾಕಿ ನಂತರ ಬಂದ ಪರಮಾತ್ಮ ಅಥವಾ ಅಣ್ಣಾಬಾಂಡ್ ಯಾವುದೂ 'ಮಿಲನ' ಚಿತ್ರದಂತೆ ಸೂಪರ್ ಹಿಟ್ ಆಗಲಿಲ್ಲ. 'ನೆನಪಿರಲಿ' ನಂತರ ಪ್ರೇಮ್ ತುಂಬಾ ವರ್ಷ ಮರೆಯಾಗಿದ್ದರು.

ಗಣೇಶ್ ತಿಳಿದುಕೊಳ್ಳಬೇಕಾದದ್ದು ಇಷ್ಟೇ.. ಸಿನಿಮಾ ಚೆನ್ನಾಗಿದ್ದರೆ ಮಾತ್ರ ಪ್ರೇಕ್ಷಕರು ನೋಡುತ್ತಾರೆ. ಪ್ರಚಾರದಿಂದಾಗಲೀ ನಟರ ಜನಪ್ರಿಯತೆಯಿಂದಾಗಲೀ ಚಿತ್ರ ಸೂಪರ್ ಹಿಟ್ ಆಗುವುದಿಲ್ಲ. ಒಂದು ಚಿತ್ರ ಗೆದ್ದಾಗ ಮುಂದಿನ ಚಿತ್ರಕ್ಕೆ ಹೆಚ್ಚು ಓಪನಿಂಗ್ ಸಿಗುತ್ತದೆ ಅಷ್ಟೇ. ಆದರೆ ಮುಂದಿನ ವಾರವೇ ಚಿತ್ರ ಬಿದ್ದು ಹೋಗುತ್ತದೆ.

ಕಾರಣ, ಪ್ರೇಕ್ಷಕರ 'ಮೌತ್ ಪಬ್ಲಿಸಿಟಿ' ಎಲ್ಲದಕ್ಕಿಂತ ಹೆಚ್ಚು ಪರಿಣಾಮಕಾರಿ. ಹಾಗಾಗಿ, ಗಣೇಶ್ ಚಿತ್ರ ಒಪ್ಪಿಕೊಳ್ಳುವಲ್ಲಿ ಜಾಣತನ ತೋರಿಸಬೇಕು. ಚಿತ್ರದ ಕಥೆ ಎಲ್ಲದಕ್ಕಿಂತ ಮುಖ್ಯವಾಗಬೇಕು. ಚಿತ್ರದ ಕಥೆ ಜನರಿಗೆ ಇಷ್ಟವಾಗಬಲ್ಲದೇ ಎಂಬುದನ್ನು ತಿಳಿದುಕೊಳ್ಳುವ ಜಾಣ್ಮೆ ಗಣೇಶ್ ಅವರಿಗೆ ಸಿದ್ಧಿಸಬೇಕು. ಅವರಿಗೆ ಆಗದಿದ್ದರೆ ಅದನ್ನು ಸೂಕ್ತ ವ್ಯಕ್ತಿಗೆ ಒಪ್ಪಿಸಬೇಕು.

ಎಲ್ಲದಕ್ಕಿಂತ ಮೊದಲು "ಕಥೆ ಆಮೇಲೆ ನೋಡೋಣ, ನನಗೆ ಸಂಭಾವನೆ ಇಷ್ಟು ಕೊಡಿ" ಎನ್ನುವುದನ್ನು ನಿಲ್ಲಿಸಬೇಕು. ಕಥೆಯನ್ನು ಮೊದಲು ಕೇಳಿ ಆಮೇಲೆ ಸಂಭಾವನೆಗೆ ಬೇಡಿಕೆ ಇಡಬೇಕು. ಅವರೇ ಬೇಕು ಎನ್ನುವವರು ಕೊಟ್ಟೇ ಕೊಡುತ್ತಾರೆ. ಚಿತ್ರ ಅವರಿಂದ ಗೆಲ್ಲುತ್ತದೆ ಎಂದಾದರೆ ನಿರ್ಮಾಪಕರು ಕೊಟ್ಟೇ ಕೊಡುತ್ತಾರೆ ಎಂಬುದು ಗಣೇಶ್ ಗಮನಕ್ಕಿರಲಿ.

ಸಿನಿಮಾ ಮೇಲಿನ ಗಣೇಶ್ ಪ್ರೀತಿ ಹಾಗೂ ಪ್ರಚಾರ ಮಾಡುವ ರೀತಿಗೆ ಯಾರಿಂದಲೂ ಎರಡು ಮಾತಿಲ್ಲ. ಆದರೆ ಒಂದು ಚಿತ್ರದ ಯಶಸ್ಸಿಗೆ ಪ್ರಚಾರಕ್ಕಿಂತ ಪ್ರಮುಖವಾಗಿರುವುದು ಚಿತ್ರ ನೋಡುವಂತ ಪ್ರೇಕ್ಷಕರಿಗೆ ಹೊಸತೇನೋ ಸಿಕ್ಕಿದ ಅನುಭವ ನೀಡುವ ಕಥೆ ಹಾಗೂ ಇಷ್ಟವಾಗಬಹುದಾದ ಮೇಕಿಂಗ್.

ಅದನ್ನು ಗಣೇಶ್ ಅರಿಯಬೇಕು. ಅದನ್ನು ಬಿಟ್ಟು ಸಿನಿಮಾ ಮುಗಿಸಿ ನಂತರ ಪ್ರಚಾರಕ್ಕಾಗಿ ಊರೂರು ಸುತ್ತಿದರೆ ಬೆಳ್ಳಗಿರುವ ಗಣೇಶ್ ಕಪ್ಪಾಗಬಹುದೇ ಹೊರತೂ ಸಿನಿಮಾ ಗೆಲ್ಲುವ ಖಾತ್ರ ದೊರೆಯಲಾರದು. ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಈಗ ಅತ್ಯಗತ್ಯವಾದ ಗೆಲುವನ್ನು ರೋಮಿಯೋ ನೀಡಬಲ್ಲದೇ ಎಂಬುದು ಸದ್ಯದ ಪ್ರಶ್ನೆ.

ಆದರೆ ಅದಕ್ಕೆ ಉತ್ತರ ಯಾರಿಗೂ ಗೊತ್ತಿಲ್ಲ. ಚಿತ್ರತಂಡ ಹೌದು ಎನ್ನುವುದು ಸಹಜವೇ. ಆದರೆ ಪ್ರೇಕ್ಷಕರ ನಾಡಿಮಿಡಿತ ರೋಮಿಯೋ ಚಿತ್ರಕ್ಕೆ ಮಿಡಿಯಬಹುದೇ? ಆ ಚಿತ್ರವನ್ನು ಪ್ರೇಕ್ಷಕರು ಇಷ್ಟಪಡುವಂತೆ ಮಾಡಿದ್ದಾರೆಯೇ? ಗಣೇಶ್ ವೃತ್ತಿಜೀವನ ಹಾಗೂ ಈ ಎಲ್ಲಾ ಪ್ರಶ್ನೆಗಳಿಗೆ ರೋಮಿಯೋ ಬಿಡುಗಡೆ ನಂತರ ಉತ್ತರ ದೊರಕಬೇಕಷ್ಟೇ! (ಒನ್ ಇಂಡಿಯಾ ಕನ್ನಡ)
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: ಪ್ರಚಾರದಿಂದ ಚಿತ್ರ ಗೆಲ್ಲಬಹುದೇ?

Post by Admin on Sun Jun 10, 2012 7:17 pm

9 ಸತತ ಸೋಲುಗಳಿಂದ ಗಣೇಶ್ ಹೊರ ಬರುವರೇ?

Post by Admin on Tue Jun 12, 2012 11:58 pm

9 ಸತತ ಸೋಲುಗಳಿಂದ ಗಣೇಶ್ ಹೊರ ಬರುವರೇ?

ಗೋಲ್ಡನ್ ಸ್ಟಾರ್ ಗಣೇಶ್ ಗ್ರಹಚಾರವೇ ಸರಿಯಿದ್ದಂತಿಲ್ಲ. ಒಂದು ಕಾಲವಿತ್ತು, ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿತ್ತು. ಈಗ ಹಾಗಲ್ಲ. ವಿಮರ್ಶಕರಿಂದ ಬೆನ್ನು ತಟ್ಟಿಸಿಕೊಂಡರೂ ಪ್ರೇಕ್ಷಕರನ್ನು ಸೆಳೆಯಲು ಅವರ ಸಿನಿಮಾಗಳಿಂದ ಸಾಧ್ಯವಾಗುತ್ತಿಲ್ಲ. ಅದಕ್ಕೆ ಸಾಕ್ಷಿ, ಗಣೇಶ್ ಒಂಬತ್ತು ಚಿತ್ರಗಳು ನಿರಂತರವಾಗಿ ಮುಗ್ಗರಿಸಿರುವುದು. ಹೀಗೆ ಪ್ರಪಾತದಲ್ಲಿರುವ ಗಣೇಶ್‌ರನ್ನು 'ಶೈಲೂ'ವಾದರೂ ಕಾಪಾಡುತ್ತಾನಾ?

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬಹುಶಃ ಗಣೇಶ್ ಈಗೀಗ ನಿರೀಕ್ಷೆಗಳ ನಿರೀಕ್ಷೆಯನ್ನೂ ಮರೆತಿರಬಹುದು. ಮೊನ್ನೆ ಮೊನ್ನೆ ಬಿಡುಗಡೆಯಾದ 'ಮದುವೆ ಮನೆ' ಎಲ್ಲೆಡೆಯಿಂದ ಪ್ರಶಂಸೆ ಗಿಟ್ಟಿಸಿಕೊಂಡರೂ, ನಿರ್ಮಾಪಕರನ್ನು ಬಚಾವ್ ಮಾಡಿತ್ತು. ಅದಕ್ಕೂ ಮೊದಲು ಬಿಡುಗಡೆಯಾಗಿದ್ದ ಚಿತ್ರಗಳ ಕಥೆಯಂತೂ ಕರುಣಾಜನಕ.

ಅವರು ನಾಯಕನಾಗಿ ಗೆದ್ದ ಕೊನೆಯ ಚಿತ್ರ ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ'. ನಂತರ ಬಂದ ಅರಮನೆ, ಬೊಂಬಾಟ್, ಸಂಗಮ, ಸರ್ಕಸ್, ಉಲ್ಲಾಸ ಉತ್ಸಾಹ, ಮಳೆಯಲಿ ಜೊತೆಯಲಿ, ಏನೋ ಒಂಥರಾ, ಕೂಲ್, ಮದುವೆ ಮನೆ ಎಲ್ಲವೂ ಫ್ಲಾಪ್ ಫ್ಲಾಪ್ ಫ್ಲಾಪ್!

ಇಷ್ಟಾದರೂ ಗಣೇಶ್‌ಗೆ ಚಿಂತೆಯಿದ್ದಂತಿಲ್ಲ. ಗೆದ್ದೇ ಗೆಲ್ಲುವ ಭರವಸೆ ಅವರಲ್ಲಿದೆ. ಅದರಲ್ಲೂ ಎಸ್. ನಾರಾಯಣ್ ಜತೆ 'ಚೆಲುವಿನ ಚಿತ್ತಾರ'ದಂತಹ ಸೂಪರ್ ಹಿಟ್ ಚಿತ್ರ ನೀಡಿರುವುದರಿಂದ 'ಶೈಲೂ'ವಿನ ಮೇಲೆ ಒಂದು ಹಿಡಿ ಹೆಚ್ಚೇ ಭರವಸೆಯಿದೆ. ಟೀಕಾಕಾರರಿಗೂ ಗಣೇಶ್ ಉತ್ತರ ನೀಡಲು ರೆಡಿಯಾಗಿದ್ದಾರೆ. ಈ ಹಿಂದೆ ಚೆಲುವಿನ ಚಿತ್ತಾರದ ಸಂದರ್ಭದಲ್ಲೂ ಇದೇ ರೀತಿ ಕೊಂಕು ಮಾತುಗಳು ಬಂದಿದ್ದವಂತೆ. ಪಾತ್ರ ಗಣೇಶ್‌ಗೆ ಸೂಟ್ ಆಗೋದೇ ಇಲ್ಲ ಅಂತ ಹಲವರು ಮಾತನಾಡಿಕೊಂಡಿದ್ದರಂತೆ. ಈ ಬಾರಿಯೂ ಅದೇ ಪುನರಾವರ್ತನೆಯಾಗಲಿದೆ ಅನ್ನೋದು ಅವರ ವಿಶ್ವಾಸ.

ಈ ನಡುವೆ ಗಣೇಶ್ ಸ್ಲಿಮ್ಮಾಗಿ, ಟ್ರಿಮ್ಮಾಗಿದ್ದಾರೆ. ಆದರೆ ಇದಕ್ಕೆ ಕಾರಣ, ಚಿತ್ರಗಳು ಫ್ಲಾಪಾಗುತ್ತಿರುವುದಲ್ಲ. ಶೈಲೂ ಪ್ರಚಾರಕ್ಕಾಗಿ ಟಿವಿ ಚಾನೆಲ್‌ಗಳು, ರೇಡಿಯೋ ಸ್ಟೇಷನ್‌ಗಳಿಗೆ ವಿಶ್ರಾಂತಿಯಿಲ್ಲದೆ ಓಡಾಡುತ್ತಿರುವುದೂ ಅಲ್ಲ. ಮತ್ತಿನ್ನೇನು ಅಂತೀರಾ? ಯೋಗ. ಹೌದು. ಪ್ರತಿದಿನ ಒಂದೂವರೆ ಗಂಟೆಗಳ ಕಾಲ ಯೋಗ ಮಾಡುವ ಗಣೇಶ್, ಮಾಂಸಾಹಾರವನ್ನೂ ಕಡಿಮೆ ಮಾಡಿದ್ದಾರೆ. ಇವೆಲ್ಲದರ ಹಿಂದಿರುವ ಉದ್ದೇಶ, ಪ್ರೇಕ್ಷಕರನ್ನು ರಂಜಿಸಬೇಕು ಅನ್ನೋದಂತೆ.
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: ಪ್ರಚಾರದಿಂದ ಚಿತ್ರ ಗೆಲ್ಲಬಹುದೇ?

Post by Sponsored content

Sponsored content

Back to top Go down

Back to top

Permissions in this forum:
You cannot reply to topics in this forum