ಚಂದನವನ (sandalwood)


Get unique information about Karnataka & rest of the world
 
HomeHome  CalendarCalendar  FAQFAQ  SearchSearch  RegisterRegister  Log inLog in  

Share | 
 

 Om prakash rao banking on old title

Go down 
AuthorMessage
Admin

avatar

Posts : 983
Join date : 2012-05-26
Age : 35
Location : Bangalore

PostSubject: Om prakash rao banking on old title   Sat Oct 06, 2012 8:56 am

[You must be registered and logged in to see this image.]

picture source gg
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: Om prakash rao banking on old title   Sat Oct 06, 2012 8:57 am

'ಶಿವ' ಬಿದ್ದೋಯ್ತು, ಓಂ ಪ್ರಕಾಶ್‌ರಿಂದ ಈಗ ಕಿಚ್ಚನಿಲ್ಲದ 'ಹುಚ್ಚ'

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಾಯಕನಾಗಿದ್ದ 'ಶಿವ' ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದ್ದು ಹೇಗೆ? ಹೀಗೆಂದು ಪ್ರಶ್ನಿಸಿದರೆ ಮುಖ ಕೆಂಪು ಮಾಡಿಕೊಳ್ಳುತ್ತಾರೆ ಅದರ ನಿರ್ದೇಶಕ ಓಂ ಪ್ರಕಾಶ್ ರಾವ್. ನಾನು ಆ ಚಿತ್ರದ ಬಗ್ಗೆ ಈಗ ಮಾತನಾಡಲು ಇಷ್ಟಪಡೋದಿಲ್ಲ, ಆದರೂ ಆ ಫಲಿತಾಂಶದ ಹೊಣೆ ನನ್ನದು ಎನ್ನುತ್ತಾರೆ.

ಹೀಗೆಂದು ಹೇಳುತ್ತಲೇ ತಾನೇ ಹತ್ತು ವರ್ಷಗಳ ಹಿಂದೆ ನಿರ್ದೇಶಿಸಿದ್ದ, ಕಿಚ್ಚ ಸುದೀಪ್ ಸ್ಟಾರ್ ಆಗಿ ಹೊರ ಹೊಮ್ಮಿದ 'ಹುಚ್ಚ' ಚಿತ್ರದ ಹೆಸರಿನಲ್ಲೇ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದೇನೆ ಎಂದು ಬಾಂಬ್ ಹಾಕಿದ್ದಾರೆ ಓಂ ಪ್ರಕಾಶ್ ರಾವ್.

ಹೌದಂತೆ, ಸುದೀಪ್ 'ಸ್ಪರ್ಶ' ಚಿತ್ರದ ಮೂಲಕ ನಾಯಕನಾದರೂ, ಅವರು ಮಿಂಚಿದ್ದು 'ಹುಚ್ಚ' ಚಿತ್ರದಿಂದ. ಅದು ತಮಿಳಿನಲ್ಲಿ ಬಾಲಾ ನಿರ್ದೇಶಿಸಿದ್ದ 'ವಿಕ್ರಮ್' ನಾಯಕನಾಗಿದ್ದ ಚಿತ್ರದ ರಿಮೇಕ್. ಕನ್ನಡದಲ್ಲಿ ಸ್ವತಃ ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದರು. ಸುದೀಪ್ ಮನೋಜ್ಞ ಅಭಿನಯದಿಂದಾಗಿ ಚಿತ್ರ ಸೂಪರ್ ಹಿಟ್ ಆಗಿತ್ತು.

ಈಗ ಓಂ ಇನ್ನೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಅದಕ್ಕೆ 'ಹುಚ್ಚ' ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ನಾಯಕನಲ್ಲ. ಅಲ್ಲಿ ನಾಯಕಿಯಾಗಿದ್ದ ರೇಖಾ ವೇದವ್ಯಾಸ್ ಕೂಡ ಇಲ್ಲಿಲ್ಲ. ಹೊಸ ಪ್ರಾಜೆಕ್ಟ್‌ನಲ್ಲಿ ಏನಿದ್ದರೂ ಹೊಸ ಮುಖಗಳು. ಇನ್ನೂ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯರಾಗದ ನಟ-ನಟಿಯರು.

ದಶಕಗಳ ಹಿಂದಿನ 'ಹುಚ್ಚ' ತಮಿಳಿನ ರಿಮೇಕ್. ಈ ಬಾರಿಯ 'ಹುಚ್ಚ'ವೂ ರಿಮೇಕೇ?

ಈ ಬಗ್ಗೆ ನಾನು ಈಗಲೇ ಏನೂ ಹೇಳಲಾರೆ. ಒಂದಂತೂ ನಿಜ, ಇದರ ಕಥೆ ಬರೆಯುತ್ತಿರುವವರು ನಿರ್ದೇಶಕ ಗುರುಪ್ರಸಾದ್. ಅವರೇ ಸಂಭಾಷಣೆ ಕೂಡ ಬರೆಯುತ್ತಿದ್ದಾರೆ. ಅವರ ನಿರ್ದೇಶನದ 'ಡೈರೆಕ್ಟರ್ಸ್ ಸ್ಪೆಷಲ್'ನಲ್ಲಿ ನಾಯಕನಾಗಿದ್ದ ಧನಂಜಯ ನನ್ನ ಚಿತ್ರದಲ್ಲಿ ನಾಯಕ. ಆ ಹುಡುಗನ ನಟನೆಗೆ ಮಾರು ಹೋಗಿದ್ದೇನೆ ಎಂದಿದ್ದಾರೆ.

ನಾಯಕಿ ಯಾರು? ಸದ್ಯದ ಲೆಕ್ಕಾಚಾರದ ಪ್ರಕಾರ, ತಮಿಳಿನ 'ಸುಂದರ ಪಾಂಡಿಯನ್' ಚಿತ್ರದಲ್ಲಿದ್ದ ಲಕ್ಷ್ಮಿ ಮೆನನ್. ಇನ್ನೊಂದು ಪ್ರಮುಖ ಪಾತ್ರದಲ್ಲಿ ರವಿಶಂಕರ್ ನಟಿಸುತ್ತಾರೆ. ಅನೂಪ್ ಸೀಳಿನ್ ಸಂಗೀತ ನೀಡುತ್ತಾರೆ. ನವೆಂಬರ್ 22ರಂದೇ ಚಿತ್ರ ಸೆಟ್ಟೇರುತ್ತಿದೆ.

[You must be registered and logged in to see this link.] ... 4019_1.htm
Back to top Go down
http://sandalwood.forumotions.in
 
Om prakash rao banking on old title
Back to top 
Page 1 of 1

Permissions in this forum:You cannot reply to topics in this forum
ಚಂದನವನ (sandalwood) :: karnataka :: Kannada movies discussion forum-
Jump to: