ಚಂದನವನ (sandalwood)


Get unique information about Karnataka & rest of the world
 
HomeHome  CalendarCalendar  FAQFAQ  SearchSearch  RegisterRegister  Log inLog in  

Share | 
 

 Re: 1(ONE) - Omprakash Rao to direct Aditya

Go down 
AuthorMessage
barbarossa

avatar

Posts : 133
Join date : 2012-08-12
Age : 32
Location : Bangalore

PostSubject: Re: 1(ONE) - Omprakash Rao to direct Aditya   Wed Sep 05, 2012 11:02 pm

][You must be registered and logged in to see this image.][
Back to top Go down
barbarossa

avatar

Posts : 133
Join date : 2012-08-12
Age : 32
Location : Bangalore

PostSubject: Re: Re: 1(ONE) - Omprakash Rao to direct Aditya   Wed Sep 05, 2012 11:02 pm

'ಕಾಟನ್‌ಪೇಟೆ' ಅರ್ಧದಲ್ಲೇ ಬಿಟ್ಟ ಆದಿತ್ಯ '1'ಕ್ಕೆ ಜಂಪ್

ಹಾರಿದ್ದು 'ಡೆಡ್ಲಿ' ಆದಿತ್ಯ ಮಾತ್ರವಲ್ಲ, ರೀಮಿಕ್ಸ್ ನಿರ್ದೇಶಕ ಓಂ ಪ್ರಕಾಶ್ ರಾವ್ ಕೂಡ. ನಿಖಿತಾ ನಾಯಕಿಯಾಗಿದ್ದ 'ಕಾಟನ್‌ಪೇಟೆ'ಯನ್ನು ಇಬ್ಬರೂ ಅರ್ಧದಲ್ಲೇ ಬಿಟ್ಟಿದ್ದಾರೆ. ಅಂದರೆ, ಆ ಚಿತ್ರದಲ್ಲಿ ಆದಿತ್ಯ ನಾಯಕನಾಗಿದ್ದರೆ, ಓಂ ಪ್ರಕಾಶ್ ರಾವ್ ನಿರ್ದೇಶಕರಾಗಿದ್ದರು. ಕಾರಣ ಗೊತ್ತಿಲ್ಲ, ಅದು ಮುಗಿಯುವ ಮೊದಲೇ '1'ಕ್ಕೆ ಅಡಿಯಿಟ್ಟಿದ್ದಾರೆ!

1 - ಇದು ಚಿತ್ರದ ಹೆಸರು. ರಿಯಲ್ ಸ್ಟಾರ್ ಉಪೇಂದ್ರರ ಜತೆ ತ್ರಿಮೂರ್ತಿ - ತ್ರಿವಿಕ್ರಮ ಮಾಡುತ್ತೇನೆ ಅಂತ ಹತ್ತಿರ ಹೋಗಿ ಗಾಳಿ ಹೊಡೆಸಿಕೊಂಡ ಪ್ರಭಾವವೋ ಏನೋ? ಓಂ ಪ್ರಕಾಶ್ ರಾವ್ ಕೂಡ ಮ್ಯಾಜಿಕ್ ಹೆಸರುಗಳ ಮೊರೆ ಹೋಗಿದ್ದಾರೆ. ಹುಬ್ಬಳ್ಳಿ, ಕಲಾಸಿಪಾಳ್ಯ, ಮಂಡ್ಯ, ಬೆಳಗಾಂ ಗುಂಗಿನಿಂದ ಹೊರಗೆ ಬಂದು ಇನ್ನೊಂದು ಬೆರಕೆ ಸೊಪ್ಪಿನ ಸಾರು ಬಡಿಸಲು ಹೊರಟಿದ್ದಾರೆ.

ಹಾಗೆ ನೋಡಿದರೆ ಈ ಚಿತ್ರಕ್ಕೆ 'ಚಾಣಕ್ಯ' ಎಂದು ಹೆಸರಿಡಬೇಕು ಅಂತ ನಿರ್ದೇಶಕ ಓಂ ಯೋಚಿಸಿದ್ದರಂತೆ. ಆದರೆ ಆ ಶೀರ್ಷಿಕೆಯನ್ನು ಬೇರೆ ಯಾರೋ ಈಗಾಗಲೇ ನೋಂದಣಿ ಮಾಡಿಸಿದ್ದಾರೆ. ಹಾಗಾಗಿ ದಾರಿ ಕಾಣದೆ ಕಂಗಾಲಾಗಿದ್ದಾಗ '1' ಹೊಳೆದಿತ್ತು. ಈಗ ಅದೇ ಚಿತ್ರದ ಶೀರ್ಷಿಕೆಯಾಗಿದೆ.

ಒಂದು ಕಾಲದಲ್ಲಿ ಓಂ ಹಿಂದೆಯೇ ಸುತ್ತುತ್ತಿದ್ದ ನಿಖಿತಾ 'ಕಾಟನ್‌ಪೇಟೆ'ಯಿಂದ ದೂರವೇ ಉಳಿದಿದ್ದಾರೆ. ಆ ಬಗ್ಗೆ ಓಂ ಏನೂ ಮಾತನಾಡುತ್ತಲೇ ಇಲ್ಲ. ಈಗ ಕೈಗೆತ್ತಿಕೊಂಡಿರುವ '1' ಚಿತ್ರಕ್ಕೆ ಅವರಂತೂ ನಾಯಕಿಯಲ್ಲ. ಬೇರೆ ಯಾರು ಅನ್ನೋದು ಇನ್ನೂ ಖಾತ್ರಿಯಾಗಿಲ್ಲ. ಆದರೆ ಕಾಮ್ನಾ ಸಿಂಗ್ ಮತ್ತು ಕಾಂಚನಾ ಎಂಬ ಇಬ್ಬರು ಹುಡುಗಿಯರು ಎರಡು ಪಾತ್ರಗಳಿಗೆ ಆಯ್ಕೆಯಾಗಿದ್ದಾರೆ.

ಇನ್ನು ಈ ಚಿತ್ರವನ್ನು ಸ್ವತಃ ಓಂ ಪ್ರಕಾಶ್ ರಾವ್ ಅವರೇ ನಿರ್ಮಿಸುತ್ತಿದ್ದಾರೆ. ಬಜೆಟ್ ಬಗ್ಗೆ ಅವರು ಬಾಯಿ ಬಿಟ್ಟಿಲ್ಲ. ಆದರೆ ಪಕ್ಕಾ ಆಕ್ಷನ್ ಸಿನಿಮಾ, ಆದಿತ್ಯ ಇಮೇಜ್‌ಗೆ ಹೇಳಿ ಮಾಡಿಸಿದ್ದು. ಚಾಣಕ್ಯನೊಳಗೂ ಕ್ಷತ್ರಿಯ ಇರಬೇಕು ಎಂಬ ಸಿದ್ಧಾಂತವನ್ನು ಪ್ರತಿಪಾದಿಸುವ ಸಿನಿಮಾ. ಖಂಡಿತಾ ಗೆಲ್ಲುತ್ತೇನೆ ಎಂಬ ಭರವಸೆಯಿಂದಿದ್ದಾರೆ.

ಗಿರೀಶ್ ಕಾರ್ನಾಡ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಪೋಷಿಸುತ್ತಿರುವುದು ವಿಶೇಷ. ಉಳಿದಂತೆ ರಂಗಾಯಣ ರಘು, ರವಿಶಂಕರ್, ಸ್ವಸ್ತಿಕ್ ಶಂಕರ್, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ರಾಜು ತಾಳಿಕೋಟೆ ಮುಂತಾದವರು ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಜಗದೀಶ್ ವಾಲಿ ಛಾಯಾಗ್ರಹಣವಿದೆ. ಮುಂದಿನ ತಿಂಗಳೇ ಚಿತ್ರ ಸೆಟ್ಟೇರುತ್ತಿದೆ

[You must be registered and logged in to see this link.] ... 5011_1.htm
Back to top Go down
 
Re: 1(ONE) - Omprakash Rao to direct Aditya
Back to top 
Page 1 of 1

Permissions in this forum:You cannot reply to topics in this forum
ಚಂದನವನ (sandalwood) :: karnataka :: Kannada movies discussion forum-
Jump to: