ಚಂದನವನ (sandalwood)

Kiccha Sudeepa in a Trilingual Movie

Go down

Kiccha Sudeepa in a Trilingual Movie

Post by King of Mysore on Thu Aug 30, 2012 10:50 am

Setting aside all rumors Kichcha Sudeep confirmed that he is taking up N Kumar long balance film as his next after ‘Bachchan’ that is under production. In the post production time of ‘Bachchan’ for director Shashank – Sudeep, Sameera Reddy, Chiranjeevi Sarja, Nikesha Patel starring Ayyappa P Sharma directed ‘Varadanayaka’ will be on the silver screen.

Once the final shot is completed after a few days of time Sudeep is attending the muhurut of his trilingual film for producer N Kumar. N Kumar confirmed that he has been told by Sudeep on this aspect. Instead of ‘Kick’ Telugu film remake I am doing a straight subject with Sudeep. Mahadev of Hyderabad has lent the subject.

The investment I have made for thirty plus films is the expense of this one Sudeep film. After another round of discussion we intend to make in Hindi language says happy looking N Kumar.

For multilingual film of multilingual star Sudeep in N Kumar is likely to get topnotch of Indian cinema as heroine of the film.

The announcement to this effect of Sudeep and N Kumar combination is coming up on September 2, birthday of actor Sudeep
avatar
King of Mysore

Posts : 21
Join date : 2012-08-29

Back to top Go down

Re: Kiccha Sudeepa in a Trilingual Movie

Post by King of Mysore on Thu Aug 30, 2012 10:51 am

ಸುದೀಪ್ ತ್ರಿಭಾಷಾ ಚಿತ್ರಕ್ಕೆ ಬಾಲಿವುಡ್ ಹೀರೋಯಿನ್?
ಎನ್. ಕುಮಾರ್ ಅವರು ಕಿಚ್ಚ ಸುದೀಪ್‌ಗೆ ಗಾಳ ಹಾಕಲು ಶುರು ಮಾಡಿದ್ದು ಈಗೇನಲ್ಲ. ಆದರೆ ಅವರಿಗೆ ಕಾಲ ಕೂಡಿ ಬರುತ್ತಿಲ್ಲ, ಅಷ್ಟೇ. ಯಾವುದೋ ಒಂದು ಚಿತ್ರ ಮಾಡಬೇಕೆನ್ನುವಾಗ ಅವರಿಗೆ ಕಾಲವೇ 'ಕಿಕ್' ಕೊಡುತ್ತದೆ. ಆದರೆ ಈ ಬಾರಿ ಎಲ್ಲವೂ ಸರಿಯಾಗಿ ಸಾಗುತ್ತಿರುವಂತಿದೆ. ಬಾಲಿವುಡ್ ಬೆಡಗಿಯರ ಮೇಲೆಯೇ ಕುಮಾರ್ ಕಣ್ಣು ಹಾಕಿದ್ದಾರೆ.

ಸುದೀಪ್ ಸಂಗ ಕುಮಾರ್‌ಗೆ ಹೊಸತಲ್ಲ. ಕಿಚ್ಚ ನಾಯಕನಾಗಿದ್ದ ರಂಗ ಎಸ್ಸೆಸ್ಸೆಲ್ಸಿ, ಕಾಶಿ ಫ್ರಮ್ ವಿಲೇಜ್ ನಿರ್ಮಿಸಿದ್ದು ಇದೇ ಎನ್. ಕುಮಾರ್. ನಂತರ ತೆಲುಗಿನ 'ಕಿಕ್' ರಿಮೇಕ್‌ನಲ್ಲಿ ಸುದೀಪ್‌ರನ್ನೇ ನಾಯಕನ್ನಾಗಿಸುವ ವಿಫಲ ಯತ್ನವೂ ನಡೆಯಿತು. ಆ ಪ್ರಾಜೆಕ್ಟ್ ಬಿದ್ದು ಹೋದ ನಂತರ ನಾಪತ್ತೆಯಾಗಿದ್ದ ಕುಮಾರ್ ಮತ್ತೆ ಪ್ರತ್ಯಕ್ಷರಾಗಿದ್ದಾರೆ.

ಅಷ್ಟು ಹೊತ್ತಿಗೆ ಅತ್ತ ಸುದೀಪ್ ರೇಂಜ್ ಕೂಡ ಬದಲಾಗಿದೆ. ತೆಲುಗಿನಲ್ಲಿ ಸೂಪರ್ ಹಿಟ್ ಆದ ರಾಜಮೌಳಿ 'ಈಗ'ದ ನಂತರ ಅವರೀಗ ಚತುರ್ಭಾಷಾ (ಕನ್ನಡ, ತೆಲುಗು, ತಮಿಳು, ಹಿಂದಿ) ತಾರೆಯಾಗಿ ಹೊರ ಹೊಮ್ಮಿದ್ದಾರೆ. ಇದನ್ನೇ ಲಾಭದ ಲೆಕ್ಕಾಚಾರ ಹಾಕಿರುವ ಕುಮಾರ್, ತನ್ನ ಹೊಸ ಚಿತ್ರವನ್ನು ತ್ರಿಭಾಷೆಯಲ್ಲಿ ತರಲು ಯೋಜನೆ ರೂಪಿಸಿದ್ದಾರೆ. ಈಗಾಗಲೇ ಹೈದರಾಬಾದ್‌ನ ಮಹದೇವ್ ಎಂಬವರು ಕಥೆ ಬರೆದಿದ್ದಾರೆ. ಸುದೀಪ್‌ಗೂ ಕಥೆ ಇಷ್ಟವಾಗಿದೆ, ಸಾಧ್ಯವಾದರೆ ಹಿಂದಿಯಲ್ಲೂ ಇದನ್ನು ನಿರ್ಮಿಸುವ ಇರಾದೆಯಿದೆ ಎಂದಿದ್ದಾರೆ ಕುಮಾರ್.

ಯಾರು ಹೀರೋಯಿನ್?
ನಿರ್ಮಾಪಕ ಎನ್. ಕುಮಾರ್ ಯಾವುದನ್ನೂ ಸರಿಯಾಗಿ ಹೇಳುತ್ತಿಲ್ಲ. ಕಾದು ನೋಡಿ ಅಂತ ಮೂತಿಗೆ ಬೆಣ್ಣೆ ಸವರುತ್ತ ಕುತೂಹಲ ಕೆರಳಿಸುತ್ತಿದ್ದಾರೆ. ಅವರು ಈಗ ಲೆಕ್ಕಾಚಾರ ಹಾಕುತ್ತಿರುವ ಹೊಸ ಚಿತ್ರದಲ್ಲಿ ಸುದೀಪ್‌ಗೆ ಯಾರು ಹೀರೋಯಿನ್ ಅಂತ ಕೇಳಿದ್ರೆ, ಕುಮಾರ್ ಕೊಡೋ ಉತ್ತರ "ಭಾರತದ ನಂ.1 ನಟಿ"!

ಅಂದ್ರೆ ಯಾರು? ಕರೀನಾ ಕಪೂರ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾರಲ್ಲಿ ಯಾರಾದ್ರೂ ಒಬ್ಬರಾ? ಹೀಗಂದರೆ, 'ಯಾಕಾಗಬಾರದು?' ಅಂತಾರೆ. ಅವರಲ್ಲಿ ಯಾರನ್ನಾದರೂ ಕುಮಾರ್ ಸಂಪರ್ಕಿಸಿದ್ದಾರಾ? ಯಾರಾದರೂ ಓಕೆ ಅಂದಿದ್ದಾರಾ? ಊಹುಂ, ಈ ಬಗ್ಗೆ ಯಾವ ಮಾಹಿತಿಯೂ ಇಲ್ಲ.

ಭಾರೀ ಬಜೆಟ್?
ರಂಗ ಎಸ್ಸೆಸ್ಸೆಲ್ಸಿ, ಕಾಶಿ ಫ್ರಮ್ ವಿಲೇಜ್, ಭದ್ರ, ನರಸಿಂಹ ಸೇರಿ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿರುವ ಕುಮಾರ್ ಈ ಬಾರಿ ನಿರ್ಮಿಸುತ್ತಿರುವ ಚಿತ್ರದ ಬಜೆಟ್ ಬಹುಕೋಟಿಗಳದ್ದು. ತಾನು ಇದುವರೆಗೆ ನಿರ್ಮಿಸಿದ ಎಲ್ಲಾ ಚಿತ್ರಗಳ ಬಜೆಟನ್ನು ಒಟ್ಟು ಸೇರಿಸಿದರೆ ಎಷ್ಟಾಗಬಹುದು, ಅಷ್ಟು ಹಣವನ್ನು ಒಂದೇ ಚಿತ್ರಕ್ಕೆ ಸುರಿಯುತ್ತಿದ್ದೇನೆ. ಎಲ್ಲವೂ ಸುದೀಪ್‌ಗೆ ಬಿಟ್ಟದ್ದು. ಅವರೇ ನಿರ್ಧರಿಸುತ್ತಾರೆ ಎಂದು ಭಾರೀ ಭರವಸೆ ಇಟ್ಟಿರುವ ಕುಮಾರ್ ಹೇಳಿದ್ದಾರೆ.

ಕಥೆಯೇನೋ ರೆಡಿಯಾಗಿದೆ, ಆದರೆ ನಿರ್ದೇಶಕರು ಯಾರು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಎರಡು ಮೂರು ಮಂದಿಯ ಬಗ್ಗೆ ಮಾತುಕತೆ ನಡೆಯುತ್ತಿದೆ. ಯಾರೂ ಸರಿಯಾಗಿಲ್ಲ ಎಂದರೆ ಸ್ವತಃ ಸುದೀಪ್ ನಿರ್ದೇಶಿಸಿದರೂ ಅಚ್ಚರಿಯಿಲ್ಲ ಎಂದು ಭುಜ ಹಾರಿಸಿದ್ದಾರೆ ಕುಮಾರ್.

ಅಂದ ಹಾಗೆ, ಈ ಹೊಸ ಪ್ರಾಜೆಕ್ಟ್ ಸುದೀಪ್ ಹುಟ್ಟುಹಬ್ಬದಂದೇ ಘೋಷಣೆಯಂತೆ. ನಾಯಕಿ, ನಿರ್ದೇಶಕರು ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಕುಮಾರ್ ಅಂದೇ ನೀಡುತ್ತಾರಂತೆ.
avatar
King of Mysore

Posts : 21
Join date : 2012-08-29

Back to top Go down

Back to top


 
Permissions in this forum:
You cannot reply to topics in this forum