ಚಂದನವನ (sandalwood)

Priyamani in Charulatha by Dwarakish Productions

Page 3 of 3 Previous  1, 2, 3

Go down

Re: Priyamani in Charulatha by Dwarakish Productions

Post by Hatavadhi on Mon Sep 17, 2012 6:18 pm

ಸಯಾಮಿ ಅವಳಿ ಪಾತ್ರದಲ್ಲಿ ಪ್ರಿಯಾಮಣಿ
ಪ್ರಿಯಾಮಣಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ, ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಾಕೆ. ಅಭಿನಯದಲ್ಲಿ ಆಕೆ ಎಂಥ ಪ್ರತಿಭಾವಂತೆ ಅನ್ನೋದು ಈಗಾಗಲೇ ಸಾಬೀತಾಗಿಯಾಗಿದೆ. ಈಗ ಇನ್ನೊಮ್ಮೆ ಅದರ ಅನಾವರಣಕ್ಕೆ ವೇದಿಕೆ ಸಜ್ಜಾಗಿದೆ.

ಅದೇ 'ಚಾರುಲತಾ'. ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ಪ್ರಿಯಾಮಣಿಯದ್ದು ಸಯಾಮಿ ಅವಳಿಯ ಪಾತ್ರ. ಭಾರತೀಯ ಚಿತ್ರರಂಗದಲ್ಲೇ ಇದೇ ಮೊದಲ ಬಾರಿಗೆ ನಟಿಯೊಬ್ಬಳು ಈ ಬಗೆಯ ಪಾತ್ರ ಮಾಡಿದ್ದಾರೆ. ಆ ಕೀರ್ತಿ ಈಗ ಪ್ರಿಯಾಮಣಿ ಪಾಲು. ಅದು ಎಷ್ಟರ ಮಟ್ಟಿಗೆ ಪ್ರೇಕ್ಷಕನ ಮನಸ್ಸನ್ನ ಮುಟ್ಟಲಿದೆ ಎಂಬುದು ಇನ್ನು ಗೊತ್ತಾಗಬೇಕಷ್ಟೆ.

‘ಪಾತ್ರ ನಿರ್ವಹಣೆ ಕಷ್ಟದ್ದು ಅಂತ ಮೊದಲೇ ಗೊತ್ತಿತ್ತು. ಆದರೆ ಬರೀ ಕಷ್ಟವಲ್ಲ, ಅದು ತುಂಬಾ ಪರಿಶ್ರಮ ಬೇಡುತ್ತದೆ ಎನ್ನೋದು ಚಿತ್ರೀಕರಣ ನಡೆಯುತ್ತಿದ್ದಂತೇ ಅರ್ಥವಾಗುತ್ತಾಹೋಯ್ತು. ನಿರ್ಮಾಪಕ ಯೋಗಿ ಮತ್ತು ನಿರ್ದೇಶಕ ಕುಮಾರ್ ತುಂಬಾ ಸಹಕಾರ ಕೊಟ್ಟರು. ಒಂದು ಶಾಟ್‍ಗಿಂತ ಮತ್ತೊಂದು ಭಿನ್ನ. ಅಷ್ಟು ಸೊಗಸಾಗಿ ಈ ಚಿತ್ರ ಮೂಡಿ ಬಂದಿದೆ. ದೀಪಿಕಾ ನನ್ನ ಡ್ಯೂಪ್ ಆಗಿ 'ಚಾರುಲತಾ'ದಲ್ಲಿ ಬಳಕೆಯಾಗಿದ್ದಾರೆ. ಹಾಗೆಯೇ ನನ್ನ ಪಾತ್ರದ ಬಾಲ್ಯದ ಪೋರ್ಷನ್‍ನಲ್ಲಿ ಗಗನ ಮತ್ತು ಗಂಧನ ಅಭಿನಯಿಸಿದ್ದಾರೆ' ಎನ್ನುತ್ತಾರೆ ಪ್ರಿಯಾ.

ಚಿತ್ರೀಕರಣದ ಅನುಭವ ಹೇಳಿ ಎಂದರೆ ಪ್ರಿಯಾಮಣಿಗೆ ನೆನಪಾಗುವುದು ರಾತ್ರಿ ಚಿತ್ರೀಕರಣ. ‘ರಾತ್ರಿ ಎಂಟರಿಂದ ಮುಜಾನೆ ಎರಡು-ಮೂರು ಗಂಟೆ ತನಕ ಶೂಟ್ ಮಾಡಲಾಗುತ್ತಿತ್ತು. ನನ್ನ ಕೆರಿಯರ್‍ನಲ್ಲೇ ರಾತ್ರಿ ಅಷ್ಟು ಸಮಯದ ತನಕ ಚಿತ್ರೀಕರಣದಲ್ಲಿ ಭಾಗವಹಿಸಿದ್ದು ಪ್ರಥಮ. ಆಗ ಕಷ್ಟವಾಯ್ತು. ಆದರೆ ಫಲಿತಾಂಶ ನೋಡಿಯಾದ ಮೇಲೆ ಮನಸ್ಸಿಗೆ ಸಂತೋಷವಾಗಿದೆ' ಎಂದು ಪ್ರಿಯಾ ಹೇಳಿದರು.

‘ಚಾರುಲತಾಕ್ಕಾಗಿ ಪೂರ್ವ ತಯಾರಿ ಏನು ಮಾಡಿಕೊಂಡಿರಲಿಲ್ಲ. ಆದರೆ ಚಿತ್ರದ ಕಥೆ, ಅದರ ಆಳ ನನಗೆ ಅರಿವಿತ್ತಾದ್ದರಿಂದ, ಅದನ್ನ ಆವಾಹಿಸಿಕೊಳ್ಳಲು ಕಷ್ಟವೇನಾಗಲಿಲ್ಲ. ಸ್ಪಾಟ್‍ಗೆ ಹೋಗಿ ಅಲ್ಲಿ ಆ ಪಾತ್ರಕ್ಕೆ ಏನು ಬೇಕೋ ಅದನ್ನ ತಯಾರಿ ಮಾಡಿಕೊಳ್ಳುತ್ತಿದ್ದೆ' ಎನ್ನುತ್ತಾರೆ ಪ್ರಿಯಾಮಣಿ. ಅಂದ ಹಾಗೆ, ಚಾರುಲತಾ ದ್ವಾರಕೀಶ್ ಅವರಿಗೆ ಇನ್ನೊಂದು ಹೊಸ ಬ್ರೇಕ್ ಕೊಡುವ ನಿರೀಕ್ಷೆಯಿದೆ. ಈ ವಿಶ್ವಾಸವನ್ನು ಚಾರುಲತಾ ಆಡಿಯೋ ರಿಲೀಸ್ ಸಮಾರಂಭದಲ್ಲಿ ಅವರು ವ್ಯಕ್ತಪಡಿಸಿದರು.

[You must be registered and logged in to see this link.] ... 68040.html
avatar
Hatavadhi

Posts : 355
Join date : 2012-06-03

Back to top Go down

Re: Priyamani in Charulatha by Dwarakish Productions

Post by Hatavadhi on Mon Sep 17, 2012 6:18 pm

ದ್ವಾರಕೀಶ್ 'ಚಾರುಲತಾ' ಗಜಪ್ರಸವ; ಸೆ.21ಕ್ಕೆ ಬಿಡುಗಡೆ
ಆಗಸ್ಟ್ 24, ಸೆಪ್ಟೆಂಬರ್ 6, ಸೆಪ್ಟೆಂಬರ್ 14 -- ಹೀಗೆ ಹಲವು ದಿನಗಳಿಗೆ ಗುರಿಯಿಟ್ಟು ಹೊಡೆದ ನಂತರ ಕೊನೆಗೂ ಕುಳ್ಳ ದ್ವಾರಕೀಶ್ ಸೆಪ್ಟೆಂಬರ್ 21ಕ್ಕೆ ಬಿಡುಗಡೆ ಎಂದು ಘೋಷಿಸಿದ್ದಾರೆ. ಅಂದು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂಗಳಲ್ಲಿ 'ಚಾರುಲತಾ' ಬಿಡುಗಡೆಯಾಗಲಿದೆ.

ಪ್ರಿಯಾಮಣಿ ಸಯಾಮಿ ಅವಳಿಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಚಾರುಲತಾ' ಥಾಯ್ ಭಾಷೆಯ 'ಅಲೋನ್' ಚಿತ್ರದ ರಿಮೇಕ್. ಕನ್ನಡದಲ್ಲಿ ಇದನ್ನು ನಿರ್ದೇಶಿಸಿರುವುದು 'ವಿಷ್ಣುವರ್ಧನ' ಖ್ಯಾತಿಯ ಪೊನ್ ಕುಮಾರನ್. ಸ್ಕಂದ ನಾಯಕನಾಗಿ ಅಭಿನಯಿಸಿದ್ದಾರೆ.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ 'ಶಿವ'ನ ಎದುರು 'ಚಾರುಲತಾ' ಬಿಡುಗಡೆಯಾಗಲಿದೆ ಎಂದು ಹೇಳಲಾಯ್ತು. ಆದರೆ ಪ್ರೊಡಕ್ಷನ್ ಕೆಲಸ ಮುಗಿದಿಲ್ಲವೆಂದು ಮುಂದಕ್ಕೆ ಹೋಯ್ತು. ನಂತರ ಒಂದಷ್ಟು ಡೇಟುಗಳು ಕೇಳಿ ಬಂದವು. ಈಗ ಕೊನೆಗೂ ಅಂತಿಮವಾದಂತಿದೆ. ಸೆ.21ರ ಶುಕ್ರವಾರವೇ ಬಿಡುಗಡೆ ಅಂತ ಚಿತ್ರತಂಡ ಘೋಷಿಸಿದೆ.

'ಚಾರುಲತಾ'ಳಿಗೆ ಕನ್ನಡದಲ್ಲಿ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ಕೊಟ್ಟಿದೆ, ಅತ್ತ ತಮಿಳಿನಲ್ಲೂ ಒಂದೆರಡು ದಿನಗಳಲ್ಲಿ ಸಿಗಲಿದೆ. ಆಡಿಯೋ ಮಾರುಕಟ್ಟೆಗೆ ಬಂದಾಗಿದೆ. ಟ್ರೇಲರುಗಳು ಇಂಟರ್ನೆಟ್, ಟಿವಿಗಳಲ್ಲಿ ರಂಪ ಮಾಡುತ್ತಿವೆ. ಅಕ್ಟೋಬರ್ 12ರಂದು 'ಮಾತರನ್' ಕೂಡ ಬಿಡುಗಡೆಯಾಗುತ್ತಿರುವುದರಿಂದ, ಸುರಕ್ಷಿತ ಅಂತರ ಇಟ್ಟುಕೊಂಡೇ 'ಚಾರುಲತಾ' ತೆರೆಗೆ ಬಂದರೆ ಉತ್ತಮ ಎಂಬುದನ್ನು ಲೆಕ್ಕಾಚಾರ ಹಾಕಿದಂತಿದೆ.

2 ಕೋಟಿ ಬಂದ್ರೆ ಆಯ್ತು...
'ಚಾರುಲತಾ' ಚಿತ್ರಕ್ಕೆ ದ್ವಾರಕೀಶ್ ಖರ್ಚು ಮಾಡಿರುವುದು 6.5 ಕೋಟಿ ರೂಪಾಯಿಗಳು. ಬಿಡುಗಡೆಗೆ ಮೊದಲೇ ನಾಲ್ಕು ಕೋಟಿ ರೂಪಾಯಿ ವಾಪಸಾಗಿದೆ. ಇನ್ನು ಮೂರು ಕೋಟಿ ಬಂದರೆ ದ್ವಾರಕೀಶ್ ಸುರಕ್ಷಿತರು. ಅದೇನೂ ಕಷ್ಟವಲ್ಲ ಅನ್ನೋದು ಈಗ ಅವರು ಹಾಕಿರುವ ಲೆಕ್ಕಾಚಾರ.

ಕನ್ನಡದಲ್ಲಿ ಗೆದ್ದರೆ ಹಿಂದಿಗೆ...
'ಚಾರುಲತಾ' ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ನಿರ್ಮಾಣವಾಗಲಿದೆ ಎಂದೇ ಚಿತ್ರೀಕರಣ ಶುರು ಮಾಡಲಾಗಿತ್ತು. ಅದರಂತೆ 32 ದಿನಗಳ ಚಿತ್ರೀಕರಣವೂ ನಡೆದಿತ್ತು. ಆ ನಂತರವಷ್ಟೇ ತಮಿಳಿನಲ್ಲೂ ಇದನ್ನು ನಿರ್ಮಿಸುವ ತೀರ್ಮಾನಕ್ಕೆ ದ್ವಾರಕೀಶ್ ಬಂದಿದ್ದರು. ತಮಿಳು ಮತ್ತು ಕನ್ನಡದಲ್ಲಿ ಚಿತ್ರೀಕರಿಸಲಾಯಿತು. ತಮಿಳಿನಿಂದ ತೆಲುಗಿಗೆ, ಕನ್ನಡದಿಂದ ಮಲಯಾಳಂಗೆ ಡಬ್ ಮಾಡಲಾಗಿದೆ. ಒಂದು ವೇಳೆ ಈ ಪ್ರಯತ್ನ ಕ್ಲಿಕ್ ಆದರೆ ಹಿಂದಿಯಲ್ಲೂ ನಿರ್ಮಿಸುವ ಯೋಜನೆಯಿದೆಯಂತೆ. ರಾಣಿ ಮುಖರ್ಜಿ, ಆಸಿನ್, ಕರೀನಾ ಕಪೂರ್‌ರಂತವರು ಸಿಕ್ಕಿದರೆ ಒಂದು ಕೈ ನೋಡುವ ಚಿಂತನೆಯಲ್ಲಿದ್ದಾರೆ ದ್ವಾರಕೀಶ್.

ಮಾತರನ್ ಕೂಡ ರಿಮೇಕ್...
'ಚಾರುಲತಾ' ಥಾಯ್ ಸಿನಿಮಾ 'ಅಲೋನ್' ರಿಮೇಕ್ ಅನ್ನೋದು ಎಲ್ಲರಿಗೂ ಗೊತ್ತು. ತಮಿಳಿನಲ್ಲಿ ಸೂರ್ಯ ಸಯಾಮಿ ಅವಳಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ 'ಮಾತರನ್' ಕೂಡ ರಿಮೇಕ್ ಅನ್ನೋ ಸಂಗತಿ ಬಯಲಾಗಿದೆ. 2003ರಲ್ಲಿ ಬಿಡುಗಡೆಯಾಗಿದ್ದ 'ಸ್ಟಕ್ ಆನ್ ಯು' ಚಿತ್ರವನ್ನೇ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ತಮಿಳೀಕರಿಸಲಾಗಿದೆಯಂತೆ.

ಕರ್ನಾಟಕ ವೈಭವ...
ಹೊಯ್ಸಳರಿಂದ ಹಿಡಿದು ಕೆಂಪೇಗೌಡ ಆಡಳಿತದವರೆಗೆ ಎಲ್ಲವನ್ನೂ ಬಿಂಬಿಸುವ ಐತಿಹಾಸಿಕ ಚಿತ್ರವೊಂದನ್ನು ದ್ವಾರಕೀಶ್ ನಿರ್ಮಿಸಲಿದ್ದಾರೆ ಅನ್ನೋದು ಹಳೆ ಸುದ್ದಿ. ಆ ಪ್ರಾಜೆಕ್ಟನ್ನು ಕುಳ್ಳ ಕೈ ಬಿಟ್ಟಂತಿಲ್ಲ. ಸುದೀಪ್, ದರ್ಶನ್, ಶಿವರಾಜ್ ಕುಮಾರ್, ಉಪೇಂದ್ರ ಮುಂತಾದವರು ನಾಯಕರಾಗಲಿರುವ 'ಕರ್ನಾಟಕ ವೈಭವ'ಕ್ಕೆ 20 ಕೋಟಿ ರೂಪಾಯಿ ಖರ್ಚು ಮಾಡುತ್ತೇನೆ. ಇಲ್ಲಿ ಯಾವ ನಟನ ಪಾತ್ರಗಳೂ ಪರಸ್ಪರ ಸಂಬಂಧ ಹೊಂದಿರುವುದಿಲ್ಲ. ಅಂಬರೀಷ್ ಚಿತ್ರದುದ್ದಕ್ಕೂ ಕಾಮೆಂಟರಿ ಕೊಡುತ್ತಾ ಹೋಗುತ್ತಾರೆ ಎಂದು ದ್ವಾರಕೀಶ್ ಹೇಳಿದ್ದಾರೆ.

[You must be registered and logged in to see this link.] ... 2009_1.htm
avatar
Hatavadhi

Posts : 355
Join date : 2012-06-03

Back to top Go down

Re: Priyamani in Charulatha by Dwarakish Productions

Post by Hatavadhi on Mon Sep 17, 2012 6:19 pm

ಚಾರುಲತಾ ಹಾಡುಗಳು ಮಾರುಕಟ್ಟೆಗೆ.
ದ್ವಾರಕೀಶ್ ಚಿತ್ರ ನಿರ್ಮಿಸಿರುವ , ಕುಮಾರನ್ ನಿರ್ದೇಶನದ , ಪ್ರಿಯಮಣಿ ಸಯಾಮಿಯಾಗಿ ಕಾಣಿಸಿಕೊಳ್ಳುತ್ತಿರುವ ಚಾರುಲತಾ ಚಿತ್ರದ ಧ್ವನಿಸುರಳಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸುಂದರ್ ಸಿ ಬಾಬು ಅವರ ಸಂಗೀತ ನಿರ್ದೇಶನವಿರುವ ಚಿತ್ರದ ಹಾಡುಗಳು ಅತ್ಯದ್ಭುತವಾಗಿ ಮುಡಿಬಂದಿದ್ದು ಮೆಲೋಡಿಗೆ ಅತ್ಯಂತ ಪ್ರಾಮುಖ್ಯತೆಯನ್ನು ನಿಡಿ ಸುಮಧುರ ಸಂಗೀತವನ್ನು ಅಳವಡಿಸಲಾಗಿದೆ ಎನ್ನುತ್ತದೆ ಚಾರುಲತಾ ಚಿತ್ರತಂಡ.

ಈಗಾಗಲೇ ಯೂಟ್ಯೂಬ್‍ನಲ್ಲಿ ಚಿತ್ರದ ಪ್ರೋಮೋ ಸಕ್ಕತ್ ಸುದ್ಧಿ ಮಾಡಿದ್ದಷ್ಟೇ ಅಲ್ಲದೇ ಮೆಚ್ಚುಗೆಯನ್ನೂ ಪಡೆದುಕೊಂಡಿದ್ದು , ಪ್ರಿಯಮಣಿ ಅವರ ಅಭಿನಯಾ ಚಾತುರ್ಯವನ್ನು ಮೆಚ್ಚಿಕೊಂಡು ಸಾಕಷ್ಟು ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ. ಸಯಾಮಿಗಳಿಬ್ಬರು ಪ್ರೀತಿ ವಿಚಾರಕ್ಕಾಗಿ ಬೇರ್ಪಡುವಂತಹ ವಿಭಿನ್ನ ಕಥೆಯನ್ನಾಧರಿಸಿರುವ ಚಾರುಲತಾ ಚಿತ್ರ ಇದೇ ತಿಂಗಳ 20ರಂದು ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಳ್ಳಲು ಸಜಾಗುತ್ತಿದೆ.

[You must be registered and logged in to see this link.]
avatar
Hatavadhi

Posts : 355
Join date : 2012-06-03

Back to top Go down

Re: Priyamani in Charulatha by Dwarakish Productions

Post by Hatavadhi on Mon Sep 17, 2012 6:19 pm

Charulatha' to be released on September 13?
The Kannada film 'Charulatha' release is further deferred. Earlier, it was expected to hit the silver screen on September 6, 2012.
According to sources 'Charulatha' in Kannada, Telugu, Tamil and Malayalam will release simultaneously on September 13, 2012. The film made in Kannada and Telugu is dubbed to Tamil and Malayalam.
The release of 'Charulatha' with Priyamani doing the conjoined roles is surely going to make a good talk. To avoid the clash up with 'Maattrraan' in which Suriya, the top Tamil actor had essayed the similar role, 'Charulatha' release activity is on a war footing. Suriya's 'Maattrraan' is slated for mid October release.
'Charulatha' is inspired from Korean film 'Alone'. P Kumaran is the director of the film, it introduces Skanda as hero. Saranya, Seetha, Ravishanker, Master Manjunath, Sudarahan and others are in the cast.
Sunder C Babu is music director and Panneer Selvam is cameraman. The film features stunts by Danny, choreography by Harsha, art by Mohan B Kere and Yoganand Muddhan is the dialogue writer.

[You must be registered and logged in to see this link.] ... 1-205.html
avatar
Hatavadhi

Posts : 355
Join date : 2012-06-03

Back to top Go down

Re: Priyamani in Charulatha by Dwarakish Productions

Post by Hatavadhi on Mon Sep 17, 2012 6:19 pm

ಪ್ರಿಯಾಮಣಿ ಕಾಲೇಜ್ ವಿಷ್ಯ
ಪ್ಲೀಸ್.. ಇದು ಗುಟ್ಟಿನ ವಿಷಯ. ಯಾರಿಗೂ ಹೇಳಬೇಡಿ. ನಮ್ಮ ಮನೆಯವರಿಗೂ ಗೊತ್ತಿಲ್ಲ. ನನಗೂ ಮತ್ತು ನನ್ನ ಗೆಳತಿ ರಾಗಿಣಿಗೆ ಮಾತ್ರ ಅದು ಗೊತ್ತು. ಕಾಲೇಜು ದಿನಗಳು ಅಂದರೆ, ನೆನಪಾಗುವುದು ಕೇವಲ ಆ ವಿಷಯ ಮಾತ್ರ. ಎಂತಹ ಮಜಾ ಇರ್ತಿತ್ತು ಗೊತ್ತಾ? ಆ ದಿನಗಳು ಮತ್ತೆ ಇವತ್ತಿಗೂ ಸಿಕ್ಕಿಲ್ಲ. ಕಾಲೇಜು ಕ್ಯಾಂಪಸ್ ಅಂದರೆ ಕೂಲ್.. ಕೂಲ್. -ಪ್ರಿಯಾಮಣಿ

ಕಾಲೇಜು ಕ್ಯಾಂಪಸ್ ಎಲ್ಲರಿಗೂ ಒಂದೇ ರೀತಿಯಲ್ಲಿ ಕಂಡಿಲ್ಲ. ಕಾಣುವುದಕ್ಕೆ ಸಾಧ್ಯವೂ ಇಲ್ಲ. ಅದೊಂದು ರೀತಿಯ ಮ್ಯಾಜಿಕ್ ಪ್ರದೇಶ. ಕ್ಷಣವೂ ಅಚ್ಚರಿಯನ್ನು ತಂದಿಡುವಂಥದ್ದು. ಇಂತಹ ಕಾಲೇಜಿನ ಲೈಫ್ ಬಗ್ಗೆ ಮಾತಾಡದಿರಲು ಸಾಧ್ಯವೆ? ಇಂಥದ್ದೊಂದು ಪ್ರಶ್ನೆಯನ್ನು ಪ್ರಿಯಾಮಣಿ ಅವರ ಮುಂದಿಟ್ಟಾಗ ಸಖತ್ ಥ್ರಿಲ್ಲಾದರು. ಒಂದು ಕ್ಷಣ ಏನು ಹೇಳಬೇಕೆಂದು ತೋಚದೆ ವೌನಕ್ಕೆ ಜಾರಿದರು.

ಪ್ರಿಯಾಮಣಿ ಪಂಚಭಾಷಾ ತಾರೆ. ನಟಿಸಿದ ಪಾತ್ರಗಳೆಲ್ಲ ಪ್ರೇಕ್ಷಕನಿಗೆ ಥ್ರಿಲ್ ನೀಡಿವೆ. ತಮಿಳಿನ ಹೆಸರಾಂತ ನಿರ್ದೇಶಕ ಭಾರತೀರಾಜ್ ಅವರ ಕಂದಲಾಲ್ ಕೈದ ಸೈ' ಚಿತ್ರದ ಮೂಲಕ ಚಿತ್ರೋದ್ಯಮಕ್ಕೆ ಪರಿಚಯವಾದರು. ನಂತರ ತೆಲುಗು, ಮಲೆಯಾಳಂ, ಹಿಂದಿ, ಕನ್ನಡ ಸಿನಿಮಾಗಳಲ್ಲಿ ಗುರುತಿಸಿಕೊಂಡರು. ತಮಿಳಿನ ಪರುಥಿ ವೀರನ್ ಚಿತ್ರದ ಅಭಿನಯಕ್ಕೆ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರವನ್ನೂ ಪಡೆದು ಹೆಮ್ಮೆಯ ನಟಿ.

ಇವರದ್ದು ಮೂಲತಃ ಕೇರಳದ ಪಾಲಕ್ಕಾಡ್. ಆದರೆ, ಬೆಳೆದದ್ದು ಬೆಂಗಳೂರಿನಲ್ಲಿ. ಹಾಗಾಗಿ ಪ್ರಾರ್ಥಮಿಕ ಮತ್ತು ಕಾಲೇಜು ಶಿಕ್ಷಣವನ್ನು ಇಲ್ಲಿಯೇ ಮುಗಿಸಿದ್ದಾರೆ. ಮೊದಲು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು, ಆಮೇಲೆ ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡವರು. ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಹೆಮ್ಮೆ ಇವರದ್ದು. ಸದ್ಯ ಕನ್ನಡದ ನಿರೀಕ್ಷಿತ ಚಿತ್ರ ಚಾರುಲತಾ ಬಿಡುಗಡೆಯ ಸಿದ್ಧತೆಯಲ್ಲಿದೆ. ಅಲ್ಲದೇ ಮಲೆಯಾಳಂನ ಗ್ರ್ಯಾಂಡ್ ಮಾಸ್ಟರ್ ಚಿತ್ರದಲ್ಲಿ ಒಂದಷ್ಟು ಕಾಲೇಜಿನ ನೆನಪುಗಳನ್ನು ಮೆಲುಕು ಹಾಕುವ ಅವಕಾಶ ಸಿಕ್ಕಿದೆಯಂತೆ.

ರೀಲ್ ಕಾಲೇಜು ಲೈಫ್‌ನ್ನು ಸಿನಿಮಾದಲ್ಲಿ ನೋಡಿ, ರಿಯಲ್ ಕಾಲೇಜ್ ಲೈಫ್ ಕುರಿತು ಅವರು ಹೇಳಿದ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ.
ಹಲೋ, ನಾನು ಪ್ರಿಯಾಮಣಿ. ನನ್ನ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳೋಕೆ ಒಂದು ರೀತಿ ಥ್ರಿಲ್; ಇನ್ನೊಂದು ರೀತಿಯಲ್ಲಿ ಮುಜುಗರ. ಥ್ರಿಲ್ ಯಾಕೆಂದರೆ, ಅಂತಹ ದಿನಗಳು ಮತ್ತೆ ಸಿಗುವುದಿಲ್ಲ. ಅವುಗಳನ್ನು ಹೀಗೆ ನೆನಪಿಸಿಕೊಳ್ಳೊಕೆ ಮಾತ್ರ ಸಾಧ್ಯ. ಮುಜಗರ ಪಡುವ ವಿಷಯ ಅಂದರೆ, ನಾನು ಸಖತ್ ಆಗಿ ಕಾಲೇಜ್ ಬಂಕ್ ಮಾಡುತ್ತಿದ್ದೆ. ಪ್ರೈಮರಿ ಎಜ್ಯುಕೇಷನ್ ಆಗಿದ್ದು ಬೆಂಗಳೂರಿನ ಅರಬಿಂದೊ ಮೆಮೊರಿಯಲ್ ಸ್ಕೂಲ್‌ನಲ್ಲಿ. ಕಾಲೇಜು ಬಿಷಪ್ ಕಾಟನ್ ವುಮನ್ ಕಾಲೇಜ್.

ಸ್ಕೂಲ್ ದಿನಗಳಲ್ಲಿ ನಾನು ಸಖತ್ ಚೂಟಿ ಆಗಿದ್ದೆ. ಅದನ್ನೇ ಕಾಲೇಜಿನಲ್ಲೂ ಕಂಟಿನ್ಯೂ ಮಾಡಿದೆ. ಬಹುತೇಕವಾಗಿ ಎಲ್ಲ ತಂದೆ-ತಾಯಿಗಳು ತಮ್ಮ ಮಕ್ಕಳು ಇಂಥದ್ದೆ ವೃತ್ತಿಯನ್ನು ಮಾಡಬೇಕು, ಇದನ್ನೇ ಓದಬೇಕು ಎಂದು ಕನಸು ಕಂಡಿಕೊಂಡು ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಾರೆ. ಆದರೆ, ನಮ್ಮ ಮನೆಯಲ್ಲಿ ಅಂತಹ ಆಸೆಗಳು ಏನೂ ಇರಲಿಲ್ಲ. ಇನ್‌ಫಾಕ್ಟ್ ನನಗೂ ಕೂಡ. ಕಾಲೇಜು ಹೋಗಬೇಕು ಹೋಗುತ್ತಿದ್ದೆ. ಆ ಕಾಲೇಜಿನಲ್ಲಿ ಇಂತಿಷ್ಟು ವಿಭಾಗಗಳು ಇವೆ. ಅದರಲ್ಲಿಯೇ ಸಬ್ಜಕ್ಟ್ ಆಯ್ಕೆ ಮಾಡಿಕೊಳ್ಳಬೇಕೆಂಬ ಅಲ್ಲಿನ ಪದ್ಧತಿ, ಅದನ್ನೇ ಅನುಸರಿಸಿ ಸೈಕಾಲಜಿ ವಿಷಯವನ್ನು ಆಯ್ಕೆ ಮಾಡಿಕೊಂಡೆ. ನಾನು ಪದವಿ ಮುಗಿಸಿದ್ದು ಮನೋವಿಜ್ಞಾನದಲ್ಲಿ.

ನಿಜ ಹೇಳಬೇಕೆಂದರೆ, ಅಂಥದ್ದೊಂದು ವಿಷಯವನ್ನು ಯಾಕೆ ಆಯ್ಕೆ ಮಾಡಿಕೊಂಡೆ ಎಂದು ಯಾರಾದರೂ ಕೇಳಿದರೆ, ನನ್ನ ಬಳಿ ಇವತ್ತಿಗೂ ಉತ್ತರವಿಲ್ಲ. ನನಗೆ ಎಕನಾಮಿಕ್ಸ್ ಮತ್ತು ಪೊಲ್ಟಿಕಲ್ ಸೈನ್ಸ್ ಇಷ್ಟವಿಲ್ಲದ್ದರಿಂದ ಸೈಕಾಲಜಿ ವಿಷಯ ಆಯ್ಕೆ ಮಾಡಿಕೊಂಡೆ. ಆದರೆ, ಮನೆಯವರಿಗೆ ಗೊತ್ತಾಗದಂತೆ ಕ್ಲಾಸಿಗೆ ಚೆಕರ್ ಹಾಕುತ್ತಿದ್ದೆ.

ರಾಗಿಣಿ ಬೆಸ್ಟ್ ಫ್ರೆಂಡ್
ನಮ್ಮದು ವುಮೆನ್ಸ್ ಕಾಲೇಜು. ಹಾಗಾಗಿ ರಗಳೆಗಳು ಜಾಸ್ತಿ ಇರುತ್ತಿರಲಿಲ್ಲ. ಹುಡುಗರು ಇಲ್ಲ ಅಂತ ಬೇಸರವೂ ಆಗುತ್ತಿರಲಿಲ್ಲ. ಕಾಲೇಜಿನ ತುಂಬಾ ಹುಡುಗಿಯರಿದ್ದರೂ, ಅದರಲ್ಲಿ ನಾನು ಆಯ್ಕೆ ಮಾಡಿಕೊಂಡಿದ್ದು ರಾಗಿಣಿ(ಸಿನಿಮಾ ನಟಿ ರಾಗಿಣಿ ಅಲ್ಲ)ಯನ್ನು. ಇವತ್ತಿಗೂ ನನಗೆ ಆಕೆ ಬೆಸ್ಟ್ ಫ್ರೆಂಡ್. ಆಕೆಯನ್ನು ಕರೆದುಕೊಂಡು ಕ್ಲಾಸಿಗ್ ಬಂಕ್ ಹೊಡೆದು ಬ್ರಿಗೇಡ್ ರೋಡ್ ಸುತ್ತಲು ಹೋಗುತ್ತಿದ್ದೆ. ಏನೋ ಒಂದು ರೀತಿಯ ಮಜಾ ಅದು. ಒಂಚೂರು ನನಗೆ ಭಯ ಇರುತ್ತಿರಲಿಲ್ಲ. ಪರೀಕ್ಷೆಗೆ ತೊಂದರೆ ಆಗದಂತೆ ಅಟೆಂಡನ್ಸ್ ನೋಡಿಕೊಳ್ಳುತ್ತಿದ್ದೆವು. ಮಾರ್ಕ್ಸ್ ಕೂಡ ಚೆನ್ನಾಗಿ ತಗೆದುಕೊಳ್ಳುತ್ತಿದ್ದರಿಂದ, ಮನೆಯವರಿಗೆ ಇದೆಲ್ಲ ಗೊತ್ತೇ ಆಗುತ್ತಿರಲಿಲ್ಲ.

ಇದೇ ಹೊತ್ತಿನಲ್ಲಿ ಮಾಡ್ಲೆಂಗ್, ಸಿನಿಮಾಗಳಿಗೆ ಆಫರ್‌ಗಳು ಬರೋಕೆ ಶುರುವಾದವು. ಕಾಲೇಜಿನಿಂದ ನಾನು ಚಿತ್ರೋದ್ಯಮಕ್ಕೆ ಶಿಫ್ಟ್ ಆದೆ. ನನ್ನ ಲಕ್ ಅನಿಸತ್ತೆ, ಏನೋ ಕಾಲೇಜು ಮುಗಿಸಿಬಿಟ್ಟು, ಸಿನಿಮಾ ರಂಗಕ್ಕೆ ಬಂದೆ.
ಒಂದೇ ರೀತಿ ಇರಲ್ಲ

ನಾನು ಹಾಗೆ ಇದ್ದೋಳು ಇವತ್ತು ನಟಿಯಾಗಿದ್ದೇನೆ. ಕಾಲೇಜಿನ ನಂತರ ಏನೋ ಮಿಸ್ ಮಾಡಿಕೊಂಡೆ ಅಂತ ಅನಿಸತ್ತೆ. ಸಿನಿಮಾಗಳಲ್ಲಿ ಇಂತಹ ದೃಶ್ಯಗಳು ಬಂದಾಗ, ಆ ದಿನಗಳು ನೆನಪಾಗುತ್ತವೆ. ಎಲ್ಲರ ಜೀವನವೂ ಒಂದೇ ರೀತಿ ಆಗೋಕೆ ಸಾಧ್ಯ ಇಲ್ಲ ನೋಡಿ. ಅದಕ್ಕಾಗಿ ಚೆನ್ನಾಗಿ ಓದಲು ಎಲ್ಲರಿಗೂ ಹೇಳುತ್ತೇನೆ. ಖುಷಿಗಾಗಿ ಓದಿಕೊಂಡರೆ, ಖಂಡಿತಾ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ.
ನನ್ನ ಕಾಲೇಜು ಜೀವನದ ಕುರಿತು ಅಷ್ಟೊಂದು ಗಂಭೀರವಾಗಿ ತಗೆದುಕೊಳ್ಳಬೇಡಿ. ನನ್ನದು ಒಂದು ರೀತಿ ವಿಚಿತ್ರ ಗುಣ. ಅದಕ್ಕಾಗಿ ಹಾಗೆ ಮಾಡುತ್ತಿದ್ದೆ. ಎಲ್ಲರೂ ಚೆನ್ನಾಗಿ ಓದಲಿ ಎಂದು ಹಾರೈಸುತ್ತೇನೆ.

[You must be registered and logged in to see this link.] ... 323555.cms
avatar
Hatavadhi

Posts : 355
Join date : 2012-06-03

Back to top Go down

Re: Priyamani in Charulatha by Dwarakish Productions

Post by Hatavadhi on Mon Sep 17, 2012 6:21 pm

Charulatha ACD review :-

'Charulatha' Brilliant and Meaningful Songs


The new music director to Kannada Sundar C Babu has done a great job in ‘Charulatha’. Dr Nagendra Prasad in the songs has been terrific. The thinking power of this lyricist is admirable. Lyricist and music director get the equal share of applause for the film music of ‘Charulatha’.

Sundar C Babu a successful music director today in Tamil cinema has given freshness in his tunes. The violin bit after six songs is good. It reminds Kunnaikudi Vaidhyanathan violin. The pep the genius Kunnaikudi gives in his concert obviously reminds the listeners.

A good choice of lyrics and music for Dwarakish Chitra indeed! Sony Music has brought the audio CD to the market. Like the tag line of the film ‘Charulatha’ – never break a promise – this composer is not disappointing.

1. Ondu Maneya...
Singers – Ranjith, Ganga, Varsha Ranjith
Music – Sundar C Babu
Lyrics – Dr Nagendra Prasad

The cute little kids singing the first song on the nature rare creature. This Siamese twin is well drawn in the lines by Nagendra Prasad. After first stanza it takes up for the main artist Priyamani. A coin has two faces. But a mother has one tongue. The rare creation of God is explained in the lyrics. A train travel on two rails…..a touching song. This song of course makes everyone to think on the unique creation.

2. Iva Yaaro…
Singers – Suchith Suresan, Sharmila
Music – Sundar C Babu
Lyrics – Dr Nagendra Prasad

Iva Yaaro…a love song set for the happy mood in life. The new beginning of life it explains in the lines. Hudgiyalli nee thumba Gatti….is a duet song, For this age you are the owner says one of the lines. The male voice says Manasalli Serikondlu Keladanthe…. The scoring is well done for the present younger generation. Balalli Dukha Maaya, Badukalli Chytra Aramba….notifies that the new beginning has taken place for the lovers.

3. O Kandha Nagisu…Novella Maresu…
Singers – Mahathi
Music – Sundar C Babu
Lyrics – Dr Nagendra Prasad

The third song O Kandha Nagisu…Novella Maresu….Illa Devara Bhumige Ilisu….nodalu eradu kannugalu…nota onti thane…two eyes but look is one…..god has forgot something….the Avali-Jawali – twins in the form of Siamese trauma is explained questioning the god by the lyricist Dr Nagendra Prasad.

4. Kai Kaali Maa…
Singers – Senthil Das and Reshma
Music – Sundar C Babu
Lyrics – Dr Nagendra Prasad

The fourth song is on Kai Kaali Maa….is with lot of music. Alagiri Nandini….is part of this song. The music director Sunder C Babu has tried for another kind of Shambo Shiva shambo…which he scored in ‘Nadodigal’ Tamil film.

5. Jai Kaali Maa…
Singers – Senthil Das and Reshma
Music – Sundar C Babu
Lyrics – Dr Nagendra Prasad

The fifth Song - Jai Kaali Maa…traditional song of Alagiri Nandini

6. Welcome Harushave…
Singers – Suchita Suresan, Rita
Music – Sundar C Babu
Lyrics – Dr Nagendra Prasad

Welcome….song is a modern one. Welcome Sarasave, Harushave, Hrudayake…..is set in a disco environment it seems. The words like ‘Chiteyali Jothe Iruve….is an ultimate of love expression.

There is a speedy violin bit that is used for one of the moods of the film. The First love an instrumental song is quite Ok.
avatar
Hatavadhi

Posts : 355
Join date : 2012-06-03

Back to top Go down

Re: Priyamani in Charulatha by Dwarakish Productions

Post by Sponsored content


Sponsored content


Back to top Go down

Page 3 of 3 Previous  1, 2, 3

Back to top


 
Permissions in this forum:
You cannot reply to topics in this forum