ಚಂದನವನ (sandalwood)

**Gossips , Rumours & Controversies - KFI**

Go down

**Gossips , Rumours & Controversies - KFI**

Post by Admin on Mon Jul 23, 2012 3:03 pm

ಏನೀಗ, ಪ್ರೆಸ್ನೋರ್ ಕರ‍್ದು ಸೂಪರ್ ಸ್ಟಾರ್ ಕತೆ ಕದ್ ಚಿತ್ರ ಮಾಡಿದಾನೆ ಅಂತ ಹೇಳ್ಬೇಕಾ...?


ಸಿನಿಮಾ ಬಗ್ಗೆ ತಮ್ಮದೇ ಆದ ಆಸಕ್ತಿ, ಆಸ್ಥೆ, ಅಭಿರುಚಿ ಇಟ್ಟುಕೊಂಡಿರುವ ವ್ಯಕ್ತಿಯೊಬ್ಬರು ಒಂದು ಚಿತ್ರ ಮಾಡಬೇಕು ಅಂತ ತುಂಬಾ ದಿನಗಳಿಂದ ಹೇಳ್ತಾನೇ ಇದ್ದರು. ಕೊನೆಗೊಂದು ದಿನ ಹೊಸಬರನ್ನು ಹಾಕಿಕೊಂಡು ಒಂದು ಚಿತ್ರವನ್ನು ಮಾಡಿಯೂ ಬಿಟ್ಟರು. ಆ ಸಿನಿಮಾ ಅಷ್ಟೇನೂ ಹೇಳಿಕೊಳ್ಳುವಂತಿಲ್ಲದಿದ್ದರೂ, ಮೊದಲ ಚಿತ್ರಕ್ಕೆ ಸಿಗುವ ಮಾರ್ಕ್ಸ್ ಸಿಕ್ಕಿತ್ತು. ಹಾಗೆಯೇ ಒಂದೂವರೆ ಕೋಟಿ ರೂಪಾಯಿ ಕೈ ಕಚ್ಚಿತ್ತು.

ಈ ಸಿನಿಮಾ ಅನ್ನೋದು ಜೂಜಿದ್ದಂತೆ. ಕಳಕೊಳ್ಳುವುದು ಗೊತ್ತಿದ್ದರೂ ಅದರತ್ತಲಿನ ಸೆಳೆತಕ್ಕೇನೂ ಕಮ್ಮಿ ಇಲ್ಲ. ನಮ್ಮ ಹೊಸ ಉತ್ಸಾಹಿಯ ಜಾಯಮಾನವೂ ಅದೇ ಆಗಿತ್ತು. ಕಳಕೊಂಡ ಜಾಗದಲ್ಲಿಯೇ ಪಡೀಬೇಕು, ದುಡೀಬೇಕು, ಗಳಿಸಬೇಕು ಎನ್ನುವವರು. ಮತ್ತೊಂದು ಚಿತ್ರ ಮಾಡಿದರು. ಅದು ಮೊದಲ ಚಿತ್ರಕ್ಕಿಂತ ಉತ್ತಮವಾಗಿತ್ತು. ಹೂಡಿದ್ದ ಹಣ ವಾಪಸ್ ಬರದಿದ್ದರೂ ಕಳೆದುಕೊಳ್ಳುವ ಪ್ರಮಾಣ ಕಮ್ಮಿಯಾಗಿತ್ತು. ಜೊತೆಗೆ ಚಿತ್ರೋದ್ಯಮದ ಆಳ-ಅಗಲದ ಪರಿಚಯವಾಗಿತ್ತು. ಪ್ರದರ್ಶಕರು, ವಿತರಕರು, ನಿರ್ಮಾಪಕರು, ಮೀಟರ್ ಬಡ್ಡಿಯ ಫೈನಾನ್ಷಿಯರ‍್ಸ್, ಸಿನಿಮಾ ಸಂಬಂಧಿತ ಸಂಘ-ಸಂಸ್ಥೆಗಳು, ಪತ್ರಕರ್ತರು... ಹೀಗೆ ಎಲ್ಲರ ಪರಿಚಯವೂ ಆಯಿತು.

ಸಿನಿಮಾ ಮಾಡಲು ಬಂದು ಕಳೆದುಕೊಂಡ ಹಣವನ್ನು ಈ ಹೊಸದಾಗಿ ಗಳಿಸಿದ ಅನುಭವಕ್ಕೆ ಸಮ ಮಾಡಿಕೊಂಡು ಸಮಾಧಾನಗೊಂಡ ಈ ನಮ್ಮ ಹೊಸ ಚಿತ್ರ ನಿರ್ದೇಶಕರು, ಮತ್ತೆ ಮೂರನೇ ಚಿತ್ರ ಮಾಡಲು ಕತೆ ಸಿದ್ಧ ಮಾಡಿಕೊಂಡರು. ತಮಗೆ ಆಪ್ತರೆನ್ನಿಸುವ ಕೆಲವೇ ಕೆಲವು ಜನಕ್ಕೆ ಹೇಳಿ, ಅವರಿಂದ ಫೀಡ್ ಬ್ಯಾಕ್ ಪಡೆದು ನಾಯಕ ನಟನ ಆಯ್ಕೆಗಿಳಿದರು. ಕತೆ ಬೇಡುವ ನಾಯಕ ಸಿಕ್ಕಿದರೆ ಚಿತ್ರ ಕ್ಲಿಕ್ ಆಗುತ್ತದೆಂಬ ಕಾರಣಕ್ಕೆ ಚಾಲ್ತಿಯಲ್ಲಿರುವ ಮೂರ‍್ನಾಲ್ಕು ನಟರ ಕಾಲ್ ಶೀಟ್ ಕೇಳಿದರು. ಆದರೆ ಯಾರ ಕಾಲ್ ಶೀಟೂ ಸಿಗಲಿಲ್ಲ. ಅವರ ಕಾಲೆಲ್ಲ ಶೀಟ್ ಸೇರಿದ್ದವು!

ಕೊನೆಗೆ ಕನ್ನಡದ ಸೂಪರ್ ಸ್ಟಾರ್ ಸಿಕ್ಕರು. ಕತೆ ಕೇಳಲು ಕರೆದರು. ಕತೆಯನ್ನೆಲ್ಲಾ ಕೇಳಿಯಾದ ಮೇಲೆ, ಮಾಡಣ, ಫೋನ್ ಮಾಡಿ ಡೇಟ್ಸ್ ಕನ್‌ಫರ್ಮ್ ಮಾಡ್ಕೊಳಿ ಅಂದರು. ಆದರೆ ಅವರ ನಂಬರಿಗೆ ಫೋನ್ ಮಾಡಿದಾಗಲೆಲ್ಲ, ಬ್ಯುಸಿ ಟೋನ್ ಖಾಯಂ ಆಗಿರುತ್ತಿತ್ತು. ಈ ನಡುವೆ, ಹತ್ತು ವರ್ಷಗಳ ನಂತರ ಈ ಸೂಪರ್ ಸ್ಟಾರ್ ಚಿತ್ರ ನಿರ್ದೇಶಕಕ್ಕೆ ಕೈ ಹಾಕಿದ್ದರು. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರದ ಸ್ಟೋರಿ, ಸ್ಕ್ರೀನ್‌ಪ್ಲೇ, ಡೈಲಾಗ್, ಡೈರೆಕ್ಷನ್ ಎಲ್ಲವೂ ಸೂಪರ್ ಸ್ಟಾರ್ ಹೆಸರಲ್ಲಿತ್ತು.

ಕಳೆದ ಡಿಸೆಂಬರ್ ನಲ್ಲಿ ಚಿತ್ರ ಬಿಡುಗಡೆಯೂ ಆಯಿತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು, ಗಳಿಕೆಯಲ್ಲಿ ದಾಖಲೆಯನ್ನೂ ಬರೆಯತೊಡಗಿತ್ತು. ಈ ಚಿತ್ರದ ಕಥಾವಸ್ತು- ೨೦೩೦ರಲ್ಲಿ ಭಾರತ ಹೇಗಿರಬಹುದು ಎಂಬುದನ್ನು ಪ್ರಸ್ತುತ ಸಂದರ್ಭದೊಂದಿಗೆ ಥಳಕು ಹಾಕಿದ್ದಾಗಿತ್ತು. ಇದು ನಮ್ಮ ಹೊಸ ಚಿತ್ರನಿರ್ದೇಶಕರ ಕತೆಯ ಜೀವಾಳವಾಗಿತ್ತು. ಚಿತ್ರವನ್ನು ನೋಡಿ ಕುಸಿದು ಕೂತರೂ, ಕತೆ ಕೇಳಿದ ಕೆಲವರನ್ನು ಸಂಪರ್ಕಿಸಿ, ಕುಸಿದು ಕೂತದ್ದು ಸರಿಯಾಗಿಯೇ ಇದೆ ಎಂದು ಸಮರ್ಥಿಸಿಕೊಂಡರು. ಕತೆ ಕೇಳಿದ್ದವರನ್ನೆಲ್ಲ ಸಂಪರ್ಕಿಸಿದರು. ಅವರೆಲ್ಲ, ‘ಏ ಇದು ಭಾರೀ ಅನ್ಯಾಯ’ ಅಂದರು.

ಕೊನೆಗೆ ‘ಸೂಪರ್ ಸ್ಟಾರ್ ನನ್ನೇ ಕೇಳಿಬಿಡೋಣ’ ಎಂದು ತೀರ್ಮಾನಿಸಿದರು. ಎಲ್ಲರೂ- ಕತೆ ಕೇಳಿದ್ದ ಕೆಲವರು- ಸ್ಟಾರ್ ನ ಮನೆಗೇ ಹೋದರು. ದರ್ಶನಭಾಗ್ಯಕ್ಕಾಗಿ ತಾಸುಗಟ್ಟಲೆ ಕಾದುಕೂತರು. ಬಂದು ಕೂತಾಗ ‘ಸೂಪರ್ರಾಗಿ ಓಡುತ್ತಿರುವ ಈ ಚಿತ್ರದ ಕತೆ ನಮ್ಮದಲ್ಲವೇ, ನಾನು ನಿಮಗೆ ಹೇಳಿದ್ದಲ್ಲವೇ, ನಿಮ್ಮ ಕಾಲ್‌ಶೀಟ್ ಪಡೆದು ಚಿತ್ರ ಮಾಡಬೇಕೆಂದಿದ್ದಲ್ಲವೇ..’ ಎಂದರು.

ಮನೆಗೇ ಹುಡುಕಿಕೊಂಡು ಬಂದ ಜನರಿಗೂ, ಅವರ ಯಾವ ಮಾತಿಗೂ ವಿಚಲಿತರಾಗದ ಸೂಪರ್ ಸ್ಟಾರ್ ಕೂಲಾಗಿಯೇ, ‘ಹೌದು, ಏನೀಗ, ಪ್ರೆಸ್ನೋರ್ ಕರ‍್ದು ಸೂಪರ್ ಸ್ಟಾರ್ ಕತೆ ಕದ್ ಚಿತ್ರ ಮಾಡಿದಾನೆ ಅಂತ ಹೇಳ್ಬೇಕಾ... ಹೇಳ್ತೀನಿ ಬಿಡಿ’ ಅಂದರು. ಸೂಪರ್ ಸ್ಟಾರ್ ನ ಭಂಡತನಕ್ಕೆ ಬೆಚ್ಚಿ ಬಿದ್ದ ಈ ನಮ್ಮ ಹೊಸ ಚಿತ್ರನಿರ್ದೇಶಕರಿಗೆ, ‘ಅವ್ರು ಹೇಳಿದ್ರಲ್ಲೇನು ತಪ್ಪಿದೆ, ನೀವೂ ಅವರಂಗಾದ್ರೆ ಇಲ್ಲಿ ಉಳಿತಿರ, ಬೆಳಿತಿರ..’ ಅಂದ್ರು ಜೊತೆಯಲ್ಲಿ ಬಂದಿದ್ದವರು!

ಇಲ್ಲಿ ಬಾಯಿದ್ದೋನಲ್ಲ, ಬುದ್ಧಿಯಿದ್ದೋನೂ ಅಲ್ಲ, ಇನ್ನೂ ‘ಏನೇನೋ’ ಇರಬೇಕಾಗುತ್ತೆ- ಬದುಕೋಕೆ!
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Darshan slapped his fan in Mysore?

Post by Admin on Mon Jul 23, 2012 3:05 pm


Darshan seems to have become a controversy's favourite child. The Challenging star, who was hitting the headlines for all wrong reasons after beating his wife and getting arrested for the same, has landed in troubled waters again. The Kannada actor has reportedly slapped a fan in Mysore and this has shocked the Sandalwood again. However, he has refused the reports.

Talking about the controversy, Darshan said, “I don't know what to say. I always believed that the fans are good and how can a person slap anyone when you have such a feeling towards them. It is difficult to react for those media, which project me as if I have gotten into a brawl in public and claim that their reports are true.”

People, who witnessed the incident, has denied that Darshan slapped his fan in public. An onlooker said, “After attending a success meet of Sarathi at Bannur theatre, Mysore, Darshan along with the film unit got into the unit bus. However, a cop was standing behind the bus and unfortunately it ran on his feet but the team did not take notice of the accident.” Later, the police was rushed to a nearby hospital.
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

ಟಿವಿ ಮಾಧ್ಯಮಗಳ ಮೇಲೆ ಸುದೀಪ್ ಆವಾಜ್ F**K

Post by Admin on Mon Jul 23, 2012 3:07 pm


ಮಾಧ್ಯಮಗಳ ಮೇಲೆ ಕಿಚ್ಚ ಸುದೀಪ್ ಬಾಯಲ್ಲಿ ಇಂತಹ ಮಾತಾ? ಮಾಧ್ಯಮಗಳಿಗೂ ಕಿಚ್ಚ ಸುದೀಪ್‌ಗೂ ಅಷ್ಟಕ್ಕಷ್ಟೇ ಎಂಬ ಗುರುತರ ಆಪಾದನೆ ಮೊದಲಿನಿಂದಲೂ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ತೀರಾ ಇತ್ತೀಚೆಗೆ ನಡೆದಿದೆ. ಆದರೆ ಸುದ್ದಿ ಮಾತ್ರ ಎಲ್ಲೂ ಲೀಕ್ ಆಗಿಲ್ಲ.

ಈ ಘಟನೆ ನಡೆದಿರುವುದು ಕನ್ನಡ ಚಿತ್ರಗಳ ನಿರ್ಮಾಪಕ, ನಟ ಕಮ್ ನಿರ್ದೇಶಕ ದ್ವಾರಕೀಶ್ ಮನೆಯಂಗಳದಲ್ಲಿ. 'ವಿಷ್ಣುವರ್ಧನ' ಚಿತ್ರಕ್ಕೆ ಸಂಬಂಧ ಪಟ್ಟಂತೆ ವಿಶೇಷ ಪ್ರೆಸ್‌ಮೀಟನ್ನು ದ್ವಾರಕೀಶ್ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಕೇವಲ ಟಿವಿ ಮಾಧ್ಯಮ ಮಿತ್ರರನ್ನು ಮಾತ್ರ ದ್ವಾರಕೀಶ್ ಆಹ್ವಾನಿಸಿದ್ದರು.

ಟಿವಿ ಮಾಧ್ಯಮ ಮಿತ್ರರು ಸಮಯಕ್ಕೆ ಸರಿಯಾಗಿಯೇ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ದ್ವಾರಕೀಶ್ ಬಿಟ್ಟರೆ ಅಲ್ಲಿ ಬೇರೆಯವರ ಸುಳಿವಿರಲಿಲ್ಲ. ಸುದೀಪ್ ಆಗ ಬರಹಬಹುದು ಈಗ ಬರಬಹುದು ಎಂದು ಕಾದದ್ದೇ ಬಂತು. ಒಂದು ಗಂಟೆ, ಎರಡು ಗಂಟೆ ಕಾದರೂ ಪತ್ತೆ ಇಲ್ಲ ಆಸಾಮಿ.

ಕಡೆಗೆ ಮೂರು ಮುಕ್ಕಾಲು ಗಂಟೆ ಕಾಯಿಸಿದ ಸುದೀಪ್ ಬರುತ್ತಿದ್ದಂತೆ ಟಿವಿ ಮಾಧ್ಯಮಗಳ ಪಿತ್ತ ನೆತ್ತಿಗೇರಿತ್ತು. ಸಹನೆ ಕಳೆದುಕೊಂಡ ಪತ್ರಕರ್ತರು ಸುದೀಪ್‌ರನ್ನು ತರಾಟೆಗೆ ತೆಗೆದುಕೊಂಡರು. ಅದೂ ಇದೂ ಸಮಜಾಯಿಷಿ ನೀಡಿದ ಸುದೀಪ್, ತಮ್ಮ ಮಗನಿಗೆ, ಹೆಂಡತಿಗೆ ಹುಷಾರಿರಲಿಲ್ಲ ಎಂದು ಏನೋ ಒಂದು ಕಾರಣ ಕೊಟ್ಟಿದ್ದಾರೆ.

ಮಾಧ್ಯಮಗಳ ಕಿವಿಗೆ ಹೂವಿಡುವ ಈ ಮಾತುಗಳಲ್ಲಿ ಯಾಕೋ ಏನೋ ಮಾಧ್ಯಮ ಮಿತ್ರರಿಗೆ ನಂಬಿಕೆ ಬಂದಿಲ್ಲ. ಕಡೆಗೆ ಅದೂ ಇದೂ ಮಾತಿನ ಚಕಮಕಿ ನಡೆದು, ಸಿಟ್ಟಿಗೆದ್ದ 'ಗೂಳಿ'ಯಂತೆ ಗುಟುರು ಹಾಕಿರುವ ಸುದೀಪ್, F**K ಯು ಚಾನಲ್ಸ್ ಎಂಬ ಮಾತು ಅವರ ಬಾಯಿಂದ ಅಚಾನಕ್ ಆಗಿ ಹೊರಬಿದ್ದಿರುವುದು ಈಗ ಗುಟ್ಟಾಗಿ ಉಳಿದಿಲ್ಲ.
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

ಗಣೇಶ್ ಮೇಲೆ ಸಿಕ್ಕಾಪಟ್ಟೆ ರೇಗಾಡಿದ ಚಂದ್ರಶೇಖರ್

Post by Admin on Mon Jul 23, 2012 3:07 pm

ಇದು ಸ್ಯಾಂಡಲ್ ವುಡ್ ಗೋಲ್ಡ್ ಸ್ಟಾರ್ ಗಣೇಶ್ ಕಥೆ. ಈಗ ವ್ಯಥೆ ಪಡುತ್ತಾ ಗಣೇಶ್ ಬಗ್ಗೆ ಕೋಪದಿಂದ ಮಾತುನಾಡುತ್ತಿರುವ ನಿರ್ಮಾಪಕರ ಹೆಸರು ಎಂ. ಚಂದ್ರಶೇಖರ್. ಇವರು ಗಣೇಶ್ ನಟನೆಯ 'ಏನೋ ಒಂಥರಾ' ಚಿತ್ರ ನಿರ್ಮಿಸಿ ಕೈ ಸುಟ್ಟುಕೊಂಡವರು. ಅದಕ್ಕೂ ಮುನ್ನ ಪುನೀತ್ ಚಿತ್ರ ಬಿಂದಾಸ್ ನಿರ್ಮಿಸಿ ಸಿಕ್ಕಾಪಟ್ಟೆ ನಷ್ಟ ಅನುಭವಿಸಿದ್ದರು.

"ಏನೋ ಒಂಥರಾ ಚಿತ್ರದಲ್ಲಿ ಗಣೇಶ್‌ಗೆ 95 ಲಕ್ಷ ರೂಪಾಯಿ ಸಂಭಾವನೆ ಮಾತುಕತೆಯಾಗಿತ್ತು. ನಾನು 90 ಲಕ್ಷ ರೂಪಾಯಿ ನೀಡಿ ಉಳಿದ ಐದು ಲಕ್ಷ ರೂಪಾಯಿಗಳನ್ನು ಬಾಕಿ ಇಟ್ಟಿದ್ದೆ. ಇದನ್ನೇ ದೊಡ್ಡದಾಗಿ ಮಾಡಿದ್ದ ಗಣೇಶ್, ಮಾಧ್ಯಮಗಳ ಮುಂದೆ ಬಂದು ನನ್ನನ್ನು ಅವಮಾನಿಸಿದರು. ಬರೀ ಐದು ಲಕ್ಷ ರೂಪಾಯಿಗಳಿಗಾಗಿ ರಂಪ ಮಾಡಿ, ಅವರ ಪತ್ನಿ ಶಿಲ್ಪಾ ನೀಡಿದ್ದ ಚೆಕ್ಕನ್ನು ಕೂಡ ನಿರಾಕರಿಸಿದ್ದರು. ಇಂದು ಯಾಕೆ ಸುಮ್ಮನಿದ್ದಾರೆ?

'ಮದುವೆ ಮನೆ'ಯ ರೆಹಮಾನ್ ಸಂಭಾವನೆ ಕೊಟ್ಟಿಲ್ಲವೆಂದು ಯಾಕೆ ಗಲಾಟೆ ಮಾಡುತ್ತಿಲ್ಲ? ನನ್ನ ಮೇಲೆ ಮಾತ್ರ ಗಣೇಶ್ ಗೆ ದ್ವೇಷ ಯಾಕೆ? ಈಗ 'ಮದುವೆ ಮನೆ' ನಿರ್ಮಾಪಕ ರೆಹಮಾನ್, ಗಣೇಶ್‌ ಗೆ ಕೊಟ್ಟಿದ್ದು ಕೇವಲ 11 ಲಕ್ಷ ರು. ಉಳಿದ ಸುಮಾರು 80 ಲಕ್ಷ ರು. ಇನ್ನೂ ಪಾವತಿಯಾಗಿಲ್ಲ. ಅದೇ ಗಣೇಶ್ ಈಗ ಗಣೇಶ್ ಯಾಕೆ ಮಾಧ್ಯಮಗಳ ಮುಂದೆ ಬರದೇ ಸುಮ್ಮನೆ ಕುಳಿತಿರುವುದು ಯಾಕೆ?"

ಹೀಗೆ ಹಳೆ ವಿಚಾರವನ್ನು ಕೆದಕಿ ಖಾರವಾಗಿದ್ದಾರೆ ಚಂದ್ರಶೇಖರ್. 'ಏನೋ ಒಂಥರಾ' ಚಿತ್ರ ವಿವಾದಗಳಿಂದಲೇ ದೊಡ್ಡ ಸುದ್ದಿಯಾಗಿ, ಮುಸ್ಸಂಜೆ ಮಹೇಶ್ ಕೂಡ ಹೊರಬಿದ್ದಿದ್ದು ಎಲ್ಲರಿಗೂ ನೆನಪಿರಬಹುದು. ಸದ್ಯ, ಸುದೀಪ್ ನಾಯಕತ್ವದ ಚಿತ್ರ ಮಾಡುವ ತಯಾರಿಯಲ್ಲಿದ್ದಾರೆ ಚಂದ್ರಶೇಖರ್. (ಒನ್ ಇಂಡಿಯಾ ಕನ್ನಡ)
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

ಬ್ಲಡೀ ಫಕ್ಕರ್ಸ್! ನಾನ್ಯಾಕ್ರಿ ಇನ್ನೊಬ್ರ ಹೆಸರಿಟ್ಟುಕೊಳ್ಳಲಿ!

Post by Admin on Mon Jul 23, 2012 3:09 pm

ವಿಷ್ಣುವರ್ಧನ ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಸುದೀಪ್ ಮಾಧ್ಯಮಗಳ ಮೇಲೆ ಸಿಡಿದು ಬಿದ್ದದ್ದು ಒನ್‌ಇಂಡಿಯಾ ಕನ್ನಡದಲ್ಲಿ ಓದೇ ಇರುತ್ತೀರಿ. ಈಗ ಅದರ ಸಂಪೂರ್ಣ ವಿವರಗಳು ಮತ್ತಷ್ಟು ಆಳವಾಗಿ ನೀಡಲಾಗಿದೆ ನಿರಾಳವಾಗಿ ಓದಿ. ದ್ವಾರಕೀಶ್ ಅವರ ಎಚ್‍ಎಸ್‌ಆರ್ ಬಡಾವಣೆಯ ನಿವಾಸದಲ್ಲಿ ನಡೆದದ್ದಾರೂ ಏನು?

ನವೆಂಬರ್ 27ರ ಭಾನುವಾರದಂದು ದ್ವಾರಕೀಶ್ ತಮ್ಮ ವಿಷ್ಣುವರ್ಧನ ಚಿತ್ರದ ಪ್ರೆಸ್ ಮೀಟ್ ಕರೆದಿದ್ದರು. ಈ ಪತ್ರಿಕಾಗೋಷ್ಠಿಗೆ ಕೇವಲ ಟಿವಿ ಮಾಧ್ಯಮಗಳನ್ನು ಮಾತ್ರ ಆಹ್ವಾನಿಸಲಾಗಿತ್ತು. ಕಾರ್ಯಕ್ರಮ ಸಂಜೆ 3 ಗಂಟೆಗೆ ಫಿಕ್ಸ್ ಆಗಿತ್ತು. ಆದರೆ ಕಾರ್ಯಕ್ರಮ ಮೇನ್ ಅಟ್ರಾಕ್ಷನ್ ಸುದೀಪ್ ಎರಡೂವರೆ ಗಂಟೆ ತಡವಾಗಿ ಆಗಮಿಸಿದರು.

ಸುದೀಪ್ ಬಂದಾಗ ಮೊದಲು ಅವರ ಸಂದರ್ಶನ ಪಡೆಯಲು ಟಿವಿ9 ನಿರೂಪಕ ರೆಹಮಾನ್ ಮಾತಿಗೆಳೆದರು. ವಿಷ್ಣುವರ್ಧನ ಹೆಸರನ್ನು ತಮ್ಮ ಅನುಕೂಲಕ್ಕಾಗಿ ಇಡಲಾಗಿದೆಯೇ? ಎಂಬರ್ಥದಲ್ಲಿ ಒಂದು ಪ್ರಶ್ನೆ ಕೇಳಿದರು. ಅಷ್ಟೇ ಸುದೀಪ್ ಕೆಂಡಾಮಂಡಲವಾದ.
ಥೇಟು ಪರೋಡಿಯಂತೆ ಮಾತು ಆರಂಭಿಸಿದ ಸುದೀಪ್ ಬ್ಲಡೀ ಫಕ್ಕರ್ಸ್! ನಾನ್ಯಾಕ್ರಿ ಇನ್ನೊಬ್ರ ಹೆಸರಿಟ್ಕೊಂಡು ಬೆಳೀಬೇಕು. ನಂಗೆ ಯಾರ ಹೆಸರು ಇಟ್ಟುಕೊಂಡು ಬೆಳೀಬೇಕಿಲ್ಲ. ನಾನೀವಾಗ್ಲೆ ಬೆಳೆದಿದೀನಿ. ನಾನು ಚಿನ್ನದ ಸ್ಪೂನು ಇಟ್ಟುಕೊಂಡು ಹುಟ್ಟಿದವನು. ನನ್ನ ಸಾಧನೆ ನಿಮಗೇನು ಗೊತ್ತು?

ಹುಚ್ಚ, ಕಿಚ್ಚ ಹೀಗೆ ಏನು ಹೆಸರಿಟ್ರು ನನ್ನ ಸಿನೆಮಾ ಗೆಲ್ಲುತ್ತೆ. ಮೊದಲು ಸಾಧನೆ ಮಾಡ್ರಿ. ಪ್ರಶ್ನೆ ಕೇಳುವಾಗ ಸರಿಯಾಗಿ ತಿಳ್ಕೊಂಡು ಕೇಳ್ರಿ. ನಿಮ್ಗೆ ಕೇಳೋಕೆ ಬರೋಲ್ಲ ಅಂದ್ರೆ ಬೇರೆಯವರ ಹತ್ತಿರ ಸರಿಯಾಗಿ ಬರ್ಕೋಂಡು ಬನ್ನಿ ಎಂದು ಕೂಗಲಾರಂಭಿಸಿದರು. ಆಗ ಅಲ್ಲಿದ್ದ ಪತ್ರಕರ್ತರೆಲ್ಲಾ ಬೆಂಬಲಕ್ಕೆ ನಿಂತು ಸುದೀಪ್‌ರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಆದರೆ ಸುದೀಪ್ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. "ಬೇರೆ ಸ್ಟೇಟಲ್ಲಿ ನೋಡಿ, ಸ್ಟಾರ್‌ಗಳಿಗೆ ಹೇಗೆ ಮರ್ಯಾದೆ ಕೊಡ್ತಾರೆ ಅಂತ. ನೀವ್ಯಾಕೆ ಹೀಗೆ ಸಾಯ್ತಿರ. ನಿಮಗೆ ಮನುಷ್ಯತ್ವವೇ ಇಲ್ವಲ್ರಿ. ಟಿಆರ್‌ಪಿ ಬೇಕು ಅಂದ್ರೆ ಗಂಟೆಗಟ್ಲೆ ಪ್ರೋಗ್ರಾಂ ಮಾಡ್ತೀರ. ಟಿಆರ್‌ಪಿಗಾಗಿ ಇಂಥ ಪ್ರಶ್ನೆ ಕೇಳ್ತೀರ" ಎಂದರು.

ಒಟ್ಟಿನಲ್ಲಿ ಸುದೀಪ್ ವರ್ತನೆಗೆ ಬೇಸರಗೊಂಡಿರುವ ಟಿವಿ 9 ನಿರೂಪಕ ರೆಹಮಾನ್ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಈಗ ಬಿಡುಗಡೆಗೆ ಸಜ್ಜಾಗಿರುವ ವಿಷ್ಣುವರ್ಧನ ಚಿತ್ರದಲ್ಲಿ ವಿಷ್ಣುವರ್ಧನ ಅವರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎನ್ನಲಾಗಿದೆ.
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: **Gossips , Rumours & Controversies - KFI**

Post by Admin on Mon Jul 23, 2012 3:12 pm

ಸಾ.ರಾ.ಗೋವಿಂದು ಗಂಡ ಹೆಣ್ಣಾ ಎಂದ ಮದನ್


ಚಲನಚಿತ್ರ ನಿರ್ಮಾಪಕ ಮದನ್ ಪಟೇಲ್ ಹಾಗೂ ಬೆಂಗಳೂರು ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧ್ಯಕ್ಷ ಕೆ ನಾಗರಾಜು ನಡುವಿನ ಆರೋಪ ಪ್ರತ್ಯಾರೋಪಗಳ ಬಿಸಿ ಫಿಲಂ ಚೇಂಬರ್ ಬುಡಕ್ಕೂ ಮುಟ್ಟಿದೆ. ಸೆನ್ಸಾರ್‌ನ ನಾಗರಾಜ್ ಅವರ ಬೆಂಬಲಕ್ಕೆ ಫಿಲಂ ಚೇಂಬರ್ ಉಪಾಧ್ಯಕ್ಷ ಸಾ.ರಾ.ಗೋವಿಂದು ನಿಂತಿರುವುದು ಮದನ್ ಅವರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.

ಈ ಸಂಬಂಧ ಮದನ್ ಪಟೇಲ್‌ಗೆ ಸಾ.ರಾ. ಗೋವಿಂದು ಇಂಗ್ಲಿಷ್‌ನಲ್ಲಿ ಒಂದು ಪತ್ರವನ್ನು ರವಾನಿಸಿದ್ದಾರೆ. ಆ ಪತ್ರವನ್ನು ಮಾಧ್ಯಮದವರಿಗೆ ತೋರಿಸಿದ ಮದನ್, ಈ ರೀತಿಯ ತಲೆಬುಡವಿಲ್ಲದ ಪತ್ರ ಕಳುಹಿಸಿದ್ದಾರಲ್ಲಾ. ಇವರೇನು ಗಂಡಾ ಅಥವಾ ಹೆಣ್ಣಾ ಎಂದು ಗೋವಿಂದು ಅವರನ್ನು ಮದನ್ ಕೆಣಕಿದ್ದಾರೆ.

ಮದನ್ ಅವರ ಮಾತಿಗೆ ಪ್ರತಿಕ್ರಿಯಿಸಿರುವ ಗೋವಿಂದು, ತಮ್ಮ ಚಿತ್ರದ ಬಗ್ಗೆ ಮದನ್ ಪಟೇಲ್ ಅಗ್ಗದ ಪ್ರಚಾರ ಪಡೆಯಲು ಬಯಸುತ್ತಿದ್ದಾರೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧ್ಯಕ್ಷ ನಾಗರಾಜ್ ಮೇಲೆ ಪೊಳ್ಳು ಆರೋಪಗಳನ್ನು ಹೊರಿಸಿರುವುದು ಸರಿಯಲ್ಲ ಎಂದಿದ್ದಾರೆ.

ಒಂದು ವೇಳೆ ನಾಗರಾಜ್ ಅವರು ಮದನ್ ಅವರಿಂದ ಲಂಚ ಪಡೆದಿರುವುದನ್ನು ಸಾಬೀತುಪಡಿಸಿದರೆ ನಾನು ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ಅವರು ಸಾಬೀತು ಪಡಿಸಲು ವಿಫಲರಾದರೆ ಅವರು ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆಯಲಿ. ಬೇಕಾಬಿಟ್ಟಿ ಆರೋಪಗಳನ್ನು ಹೊರಿಸುವುದು ಸುಲಭ. ಅವುಗಳನ್ನು ಸಾಬೀತುಪಡಿಸಲಿ ನೋಡೋಣ ಎಂದಿದ್ದಾರೆ ಗೋವಿಂದು.

ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ನಮಗೆ ಪತ್ರ ಬಂದಿತ್ತು. ಇಂಗ್ಲಿಷ್‌ನಲ್ಲಿದ್ದ ಅದೇ ಪತ್ರಕ್ಕೆ ಸಹಿಹಾಕಿ ಮದನ್ ಪಟೇಲ್ ಅವರಿಗೆ ರವಾನಿಸಿದ್ದೇನೆ. ಸತ್ಯಾನಂದ ಚಿತ್ರಕ್ಕೆ ಸಂಬಂಧಿಸಿದ ಮೂಲ ಪತ್ರವನ್ನು ಸೆನ್ಸಾರ್ ಮಂಡಳಿ ಇಂಗ್ಲಿಷ್‌ನಲ್ಲಿ ಬರೆದಿದ್ದ ಕಾರಣ ಅದನ್ನೇ ನಾವು ಅವರಿಗೆ ರವಾನಿಸಿದ್ದೇವೆ ಎಂದು ಸಾರಾ ಗೋವಿಂದು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

ಇಲ್ಲಿ ಎಂಥೆಂಥವರೋ ಏನೇನೋ ಆಗಿಹೋದರು...: ಬಸು ಬರೆವ ಹೂ ಬಾಣ

Post by Admin on Mon Jul 23, 2012 3:14 pm

ಅವರು ಕರಾವಳಿ ಕಡೆಯಿಂದ ಬೆಂಗಳೂರಿಗೆ ಬಂದ ಹಿರಿಯ ಪತ್ರಕರ್ತರು. ಒಂದು ಸಿನಿಮಾ ಪತ್ರಿಕೆಯ ಸಂಪಾದಕರು ಕೂಡ. ಸಿನಿಮಾ ಜಗತ್ತಿನ ಜನರ ನಡುವೆ ವಿಶೇಷ ಗೌರವಕ್ಕೆ ಪಾತ್ರರಾಗಿರುವವರು. ಮುಹೂರ್ತ, ಚಿತ್ರೀಕರಣ, ಸಿನಿಮಾ ಸಂಬಂಧಿತ ಪಾರ್ಟಿಗಳಲ್ಲಿ ಗತ್ತು ಗಾಂಭೀರ್ಯದಿಂದ ಓಡಾಡುವವರು. ತಮ್ಮ ಮಾತು-ಕತೆಗಳಿಂದ ವಿಶೇಷ ಮಣೆ, ಮನ್ನಣೆಗೆ ಪಾತ್ರರಾಗುವವರು. ಕನ್ನಡ ಚಿತ್ರರಂಗಕ್ಕಾಗಿ ತಲೆಕೆಡಿಸಿಕೊಂಡು, ತಲೆಯಲ್ಲಿರುವ ಕೂದಲನ್ನೆಲ್ಲ ಕಳಕೊಂಡವರು.

ಇವರು ಇತ್ತೀಚೆಗೆ ತಮ್ಮ ಪತ್ರಿಕೆಯಲ್ಲಿ ಕನ್ನಡ ಚಲನಚಿತ್ರರಂಗದಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ, ತಮ್ಮ ಅಮೋಘ ಅಭಿನಯಕ್ಕಾಗಿ ಮೂರು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿರುವ ನಟಿ ರಾಧಿಕಾ ಪಂಡಿತ್ ಬಗ್ಗೆ ಬರೆದಿದ್ದರು. ಅವರ ಬರವಣಿಗೆಯ ಉದ್ದಕ್ಕೂ, “ಈಕೆಯನ್ನು ಫಿಲ್ಮ್ ಲ್ಯಾಂಡಿಗೆ ಕರೆತಂದಿದ್ದೇ ನಾನು, ಈಕೆಯ ಬಗ್ಗೆ ಮೊದಲು ಬರೆದದ್ದೇ ನಾನು, ಅದನ್ನು ನೋಡಿ ಪ್ರೊಡ್ಯೂಸರ್ ನನಗೆ ಫೋನ್ ಮಾಡಿದ್ದರು, ನಾನು ಅವರಿಗೆ ಪರಿಚಯಿಸಿದೆ, ಅವರು ಈಕೆಗೆ ಚಾನ್ಸ್ ಕೊಟ್ಟರು. ಅದರಿಂದ ಈಕೆ ಚಿತ್ರನಟಿ ಅನ್ನಿಸಿಕೊಂಡಳು. ಮೊದಮೊದಲು ಹೋದಲ್ಲಿ ಬಂದಲ್ಲಿ ಭಾರೀ ನಯ ವಿನಯ ತೋರಿಸುತ್ತಿದ್ದವಳು ಈಗ ಡಿಮ್ಯಾಂಡ್ ಜಾಸ್ತಿಯಾಗ್ತಿದ್ದ ಹಾಗೆ, ಈಕೆಯ ವರ್ತನೆಯೇ ಬದಲಾಗಿದೆ, ಇಲ್ಲಿ ಎಂಥೆಂಥವರೋ ಏನೇನೋ ಆಗಿಹೋದರು... ಇನ್ನು ಈಕೆ...” ಹೀಗೆ ತಮ್ಮ ಪ್ರಲಾಪವನ್ನು ಹರಿಯಬಿಟ್ಟಿದ್ದರು.

ಇದೇ ಸಂದರ್ಭದಲ್ಲಿ ಹಿರಿಯ ನಿರ್ದೇಶಕರೊಬ್ಬರು ಮಾತಿಗೆ ಸಿಕ್ಕಿದರು. ಹಿರಿಯರು. ಮೂವತ್ತು ನಲವತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿ ಹಲವು ಕ್ಷೇತ್ರಗಳಲ್ಲಿ ದುಡಿದ ಅನುಭವವಿರುವವರು. ಹಾಗೆಯೇ ಹಿರಿ-ಕಿರಿ ಪತ್ರಕರ್ತರ ಪರಿಚಯವಿಟ್ಟುಕೊಂಡವರು. ಅದಕ್ಕಿಂತಲೂ ಹೆಚ್ಚಾಗಿ ಗಾಂಧಿನಗರದ ಗೋಲ್‌ಮಾಲ್‌ಗಳಿಂದ ದೂರವಿರುವ ಸಭ್ಯರು. ಪ್ರತಿಭಾವಂತರು. ಹಾಗಾಗಿಯೋ ಏನೋ ‘ಕೈ ತುಂಬಾ ಕೆಲಸ’ ಎನ್ನುವುದು ಅವರಿಗೆ ಸಿಗಲೇ ಇಲ್ಲ. ಬೇಡಿಕೆ, ಚಾಲ್ತಿ ಎನ್ನುವುದನ್ನು ಕಾಣಲೇ ಇಲ್ಲ, ಇರಲಿ.

ಆ ಹಿರಿಯರು, “ನಾನು ಆ ನಟಿ ಪರ ವಕಾಲತ್ತು ವಹಿಸ್ತಿದೀನಿ ಅಂತ ತಿಳಿಬೇಡಿ... ಹಾಗಂತ ಪತ್ರಕರ್ತರ ವಿರುದ್ಧವೂ ಅಲ್ಲ. ಇದರಲ್ಲಿ ಆಕೆಯ ತಪ್ಪೇನಿದೆ?” ಎಂದರು.

ಏನು ಮಾತನಾಡದೆ ಸುಮ್ಮನಿದ್ದದ್ದನ್ನು ನೋಡಿ, “ಆ ನಟಿ ಇವರನ್ನು ಕೇರ್ ಮಾಡಲಿಲ್ಲ, ಗೌರವ ತೋರಲಿಲ್ಲ. ಹೌದು, ಅದು ಆಕೆ ಮಾಡಿದ ತಪ್ಪು. ಅದನ್ನು ನಾನೂ ಒಪ್ಕೋತೀನಿ. ಆದರೆ ಯಾವಾಗ? ನೀವು ಸರಿಯಾಗಿದ್ದಾಗ, ನಿಮ್ಮ ಸ್ಥಾನಮಾನಗಳಿಗೆ ತಕ್ಕಂತೆ ವರ್ತಿಸಿದಾಗ, ಅಲ್ಲವೇ? ಅದ್ಸರಿ, ಆ ನಟಿ ಕೊಟ್ಟ ಗಿಫ್ಟ್‌ಗಳನ್ನು, ಪಂಚತಾರಾ ಹೋಟೆಲ್‌ನಲ್ಲಿ ಕೊಟ್ಟ ಐಷಾರಾಮಿ ಪಾರ್ಟಿಗಳನ್ನು, ತನ್ನ ಪ್ರೊಡ್ಯೂಸರ್‌ಗಳ ಕಡೆಯಿಂದ ಕೊಡಿಸಿದ ಲಕ್ಷಾಂತರ ರೂಪಾಯಿಗಳ ಜಾಹಿರಾತುಗಳನ್ನು ಯಾಕೆ ನೀವು ನೆನೆಯುವುದಿಲ್ಲ. ಆಕೆಯಿಂದ ನಾನು ಮತ್ತು ನನ್ನ ಪತ್ರಿಕೆ ಉದ್ಧಾರವಾಯಿತು ಎಂದು ಯಾಕೆ ಬರೆದುಕೊಳ್ಳುವುದಿಲ್ಲ? ಅಷ್ಟೇ ಯಾಕೆ, ನಿಮ್ಮನ್ನು ಕೂಡ- ಪತ್ರಕರ್ತರಾಗಿ ಹೊರಹೊಮ್ಮುವ ಕಾಲಕ್ಕೆ- ಯಾರೋ ಒಬ್ಬರು ಹೀಗೆಯೇ ಗುರುತಿಸಿದ್ದಾರೆ, ಪರಿಚಯಿಸಿದ್ದಾರೆ, ಬರೆಸಿ ಪ್ರೋತ್ಸಾಹಿಸಿದ್ದಾರೆ. ಅವರ ಬಗ್ಗೆ ನೀವೆಲ್ಲಾದರೂ ಬರೆದಿದ್ದೀರಾ?” ಎಂದರು.

ಬರೆಯಲಿಕ್ಕೆ ಬರುವವರೆಲ್ಲ ಮಾನವಂತರಾಗಿದ್ದರೆ, ಮಾನವಂತರಿಗೆ ಮಿದುಳೂ ಇದ್ದರೆ, ಈ ಹಿರಿಯರ ಮಾತುಗಳು ಚಿಂತನೆಗೆ ಅರ್ಹ, ಅಲ್ಲವೆ?
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: **Gossips , Rumours & Controversies - KFI**

Post by Sponsored content


Sponsored content


Back to top Go down

Back to top


 
Permissions in this forum:
You cannot reply to topics in this forum