ಚಂದನವನ (sandalwood)

ರವಿಚಂದ್ರನ್ ಎಂಬ ಒಳ್ಳೆ ಆಸಾಮಿ

Go down

ರವಿಚಂದ್ರನ್ ಎಂಬ ಒಳ್ಳೆ ಆಸಾಮಿ

Post by Admin on Tue May 29, 2012 5:48 pm

from Udayavani

ರವಿಚಂದ್ರನ್ ಎಂಬ ಒಳ್ಳೆ ಆಸಾಮಿ

‘ಮಂಜಿನ ಹನಿ’ ಶೇ. 80ರಷ್ಟು ಮುಗಿದಿದೆ. ‘ಕ್ರೇಜಿ ಸ್ಟಾರ್’ಶೇ. 40ರಷ್ಟು ಮುಗಿದಿದೆ. ಈ ಮಧ್ಯೆ ರವಿಚಂದ್ರನ್ ಸದ್ದಿಲ್ಲದೆ ಇನ್ನೊಂದು ಚಿತ್ರವನ್ನು ಶುರು ಮಾಡುವುದಕ್ಕೆ ಹೊರಟಿದ್ದಾರೆ. ಅದೇ ‘ಆಸಾಮಿ’. ಈ ಚಿತ್ರವನ್ನು ಅವರೇ ಹುಟ್ಟುಹಾಕಿರುವ ಈಶ್ವರಿ ಡ್ರೀಮ್ಸ್ ಸಂಸ್ಥೆಯಡಿ ನಿರ್ಮಾಣವಾಗಲಿದೆ. ನಿರ್ಮಾಪಕರಾಗಿ ವಜ್ರೇಶ್ವರಿ ಕುಮಾರ್, ಗೋವಿಂದು ಮತ್ತು ರವಿಚಂದ್ರನ್ ಮಗ ಮನೋರಂಜನ್ ಇರಲಿದ್ದಾರೆ.

ಏನಿದು ‘ಆಸಾಮಿ’? ‘ಹಳ್ಳಿ ಮೇಷ್ಟ್ರು’ ಶೇಡಿನ ಆದರೆ ಬೇರೆ ತರಹದ ಸಿನಿಮಾ ಎನ್ನುತ್ತಾರೆ ರವಿಚಂದ್ರನ್. ಹಾಗಾದರೆ ಇದು ರೀಮೇಕಾ? ಇಲ್ಲ ತಮಿಳಿನ ‘ಮೊದಲ್ ಮರ್ಯಾದೈ’ ಚಿತ್ರದಿಂದ ಸೂರ್ತಿ ಪಡೆದ ಚಿತ್ರ.

ಒನ್ಸ್ ಅಗೇನ್ ಬರೀ ಸೂರ್ತಿ ಅಷ್ಟೇ. ಅದನ್ನು ರವಿಚಂದ್ರನ್ ಕನ್ನಡಕ್ಕೆ ಬೇರೆ ತರಹ ಮಾಡಿಕೊಂಡಿದ್ದಾರೆ. ತಮ್ಮದೇ ಶೈಲಿಯಲ್ಲಿ ನಿರ್ದೇಶಿಸುತ್ತಾರೆ.

ಈ ಚಿತ್ರ ಅವರ ಹುಟ್ಟುಹಬ್ಬ ಮೇ 30ರಂದು ಮುಹೂರ್ತ ಕಂಡರೂ, ಚಿತ್ರೀಕರಣ ತಡವಾಗಿ ಆರಂಭವಾಗಲಿದೆ. ಅದಕ್ಕೆ ಕಾರಣ, ಮೊದಲು ‘ಕ್ರೇಜಿ ಸ್ಟಾರ್’ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದಾಸೆ ರವಿಚಂದ್ರನ್ ಅವರದ್ದು. “ಮಂಜಿನ ಹನಿ’ಗಿಂಥ ಮುಂಚೆ ‘ಕ್ರೇಜಿ ಸ್ಟಾರ್’ ಬಿಡುಗಡಯಾಗತ್ತೆ. ‘ಮಂಜಿನ ಹನಿ’ ಇನ್ನೂ ಲೇಟ್ ಆಗುತ್ತೆ. ಗ್ರಾಫಿಕ್ಸ್‌ಗೆ ಇನ್ನೂ ಸಮಯ ಬೇಕು. ಅಭಿಮಾನಿಗಳು ತುಂಬಾ ದಿನದಿಂದ ಒಂದು ಪಿಕ್ಚರ್ ಮಾಡಿ ಅಂತ ಹೇಳ್ತಾನೆ ಇದ್ದಾರೆ. ಅವರನ್ನ ಕಾಯಿಸೋದು ಸರಿಯಿಲ್ಲ. ಹೇಗೂ ‘ಮಂಜಿನ ಹನಿ’ ತಡವಾಗ್ತಿದೆ. ತಡವಾದರೂ ಅದರ ಕೆಲಸ ಸದ್ದಿಲ್ಲದೆ ಆಗ್ತಿದೆ. ಮಧ್ಯ ಒಂದಿಷ್ಟು ಸಮಯ ಸಿಕ್ಕಿದೆ. ಅಷ್ಟರಲ್ಲಿ ‘ಕ್ರೇಜಿ ಸ್ಟಾರ್’ ಬಿಡುಗಡೆ ಮಾಡಿಬಿಡ್ತೇನೆ. ಇನ್ನು 2013 ಜನವರಿ 14ಕ್ಕೆ ತಲೆ ಕೆಳಗಾದರೂ ಸರಿ ‘ಮಂಜಿನ ಹನಿ’ ಬಿಡುಗಡೆಯಾಗೋದು ಗ್ಯಾರಂಟಿ’ ಎನ್ನುತ್ತಾರೆ ರವಿಚಂದ್ರನ್.

ಇನ್ನು ‘ಆಸಾಮಿ’ ಚಿತ್ರದ ನಾಯಕಿ ಯಾರು? ಇತರೆ ಕಲಾವಿದರು ಯಾರು? ಅಷ್ಟರಲ್ಲಾಗಲೇ ‘ಕ್ರೇಜಿ ಸ್ಟಾರ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನೊಮ್ಮೆ ಹೇಳಿದ್ದರು ರವಿಚಂದ್ರನ್. ಅದನ್ನೇ ನೆನಪಿಸಿದರು. ‘ಆಗಲೇ ಹೇಳಿದ್ನಲ್ಲಾ. ಕೊನೇವರೆಗೂ ನನ್ನ ಚಿತ್ರದಲ್ಲಿ ಯಾರು ನಟಿಸ್ತಾರೆ ಅಂತ ನನಗೇ ಗೊತ್ತಿರಲ್ಲ. ಪಾತ್ರಕ್ಕೆ ಇಂಥೋರು ಸರಿ ಎನಿಸಿದರೆ, ಫೋನ್ ಮಾಡ್ತೀನಿ. ಅವರು ಪ್ರೀತಿಯಿಂದ ಬಂದು ಅಭಿನಯಿಸಿ ಹೋಗ್ತಾರೆ’ ಎನ್ನುತ್ತಾರೆ ರವಿಚಂದ್ರನ್.

ಹೀಗೆ ಮೊದಲು ‘ಕ್ರೇಜಿ ಸ್ಟಾರ್’, ನಂತರ ‘ಆಸಾಮಿ’, ಕೊನೆಗೆ ‘ಮಂಜಿನ ಹನಿ’ ... ಇನ್ನೊಂದು ಕಡೆ ಬಿಡುಗಡೆಯಾಗಬೇಕಿರುವ ‘ಕ್ರೇಜಿ ಲೋಕ’ ಮತ್ತು ‘ಪರಮಶಿವ’ ... ಈ ವರ್ಷ ರವಿ ವರ್ಷ ಎಂದರೆ ತಪ್ಪಿಲ್ಲ.
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Back to top


 
Permissions in this forum:
You cannot reply to topics in this forum